ಮಂಗಳೂರು: ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಳೆದ ವಾರ ಮುಂದೂಡಲಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳನ್ನು ಬುಧವಾರದಿಂದ ಪುನರಾರಂಭಿಸಲಾಗಿದ್ದು ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆ ಬರೆದಿದ್ದಾರೆ.
ವಿವಿಯ ವಿವಿಧ ಕಾಲೇಜುಗಳಲ್ಲಿ ನಡೆದ ಪದವಿ ಪರೀಕ್ಷೆಗಳಲ್ಲಿ 51 ವಿಷಯಗಳಿಗೆ ಪರೀಕ್ಷೆ ನೆಡದಿದ್ದು, ಅರ್ಜಿ ಸಲ್ಲಿಸಿದ್ದ 43,864 ವಿದ್ಯಾರ್ಥಿಗಳಲ್ಲಿ 41, 989 ಮಂದಿ ಪರೀಕ್ಷೆ ಬರೆದಿದ್ದು 1875 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಸ್ನಾತಕೋತ್ತರ ವಿಭಾಗದಲ್ಲಿ 59 ವಿಷಯಗಳಿಗೆ ಪರೀಕ್ಷೆ ನಡೆದಿದ್ದು 5732 ವಿದ್ಯಾರ್ಥಿಗಳಲ್ಲಿ 5676 ಮಂದಿ ಹಾಜರಾಗಿದ್ದು, 56 ಮಂದಿ ಗೈರು ಹಾಜರಾಗಿದ್ದಾರೆ.
إرسال تعليق