ಕಾರ್ಕಳ: ಈಜಲು ಹೋದ ವಿದ್ಯಾರ್ಥಿನಿಯೊಬ್ಬಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆಯೊಂದು ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿರುವ ಅರ್ಬಿ ಫಾಲ್ಸ್ ನಲ್ಲಿ ಸೋಮವಾರ ನಡೆದಿದೆ.
ವರ್ಷಿತಾ ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿನಿ, ಮೂಲತಃ ಮಂಗಳೂರಿನವಳಾದ ವರ್ಷಿತಾ ಕಾರ್ಕಳದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೊಟೆಕ್ ವಿಭಾಗದಲ್ಲಿ ಕಲಿಯುತ್ತಿದ್ದಳು ಎನ್ನಲಾಗಿದೆ.
ಈಕೆ ವಿದ್ಯಾರ್ಥಿಗಳಿಬ್ಬರ ಜೊತೆಗೆ ಫಾಲ್ಸ್ ಗೆ ಹೋಗಿ ಈಜಲೆಂದು ನೀರಿಗೆ ಇಳಿದಿದ್ದಳು. ಈ ವೇಳೆಯಲ್ಲಿ ಮುಳುಗಿದ್ದಾಳೆ ಎನ್ನಲಾಗಿದೆ, ಬಳಿಕ ಅಗ್ನಿಶಾಮಕ ದಳದ ಸಹಾಯದಿಂದ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق