ಬೆಳಗಾವಿ: ರಕ್ಷಾ ಬಂಧನ ಕಾರಣ ಈ ದಿನ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಮತ ಕ್ಷೇತ್ರದ ಸಹೋದರರಿಗೆ ರಾಖಿ ಕಟ್ಟಿ, ಸಿಹಿ ತಿನಿಸಿದರು.
ಬೆಳಗಾವಿಯ ಕುವೆಂಪು ನಗರದ ನಿವಾಸದಲ್ಲಿ ಸರಳವಾಗಿ ರಕ್ಷಾ ಬಂಧನ ಆಚರಿಸಿದರು. ಬಳಿಕ ಮಾತನಾಡಿದ ಅವರು, ನಾಡಿನ ಎಲ್ಲಾ ಸಹೋದರರಿಗೆ ರಕ್ಷಾ ಬಂಧನದ ಶುಭಾಶಯಗಳು.
ಕಳೆದ ವರ್ಷ ಕೋವಿಡ್ ಕಾರಣ ಈ ಹಬ್ಬ ಆಚರಿಸಲು ಸಾಧ್ಯವಾಗಿಲ್ಲ.
ಈ ವರ್ಷವೂ ಕೂಡ ಕೋವಿಡ್ ಕಡಿಮೆಯಾಗಿಲ್ಲ. ಆದರೆ, ನಮ್ಮ ಸಂಸ್ಕೃತಿ ಬಿಡಲು ಸಾಧ್ಯವಿಲ್ಲ. ಹೀಗಾಗಿ, ಸರಳವಾಗಿ ಆಚರಿಸಿದ್ದೇವೆ ಎಂದರು.
Post a Comment