ವಿಟ್ಲ : ಲಾರಿ ಮತ್ತು ಆಕ್ಟೀವಾ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಈ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬುಡೋಳಿ ಎಂಬಲ್ಲಿ ಗುರುವಾರ ಸಂಭವಿಸಿದೆ.
ದ್ವಿಚಕ್ರ ವಾಹನ ಸವಾರನ ದಾಖಲೆಗಳ ಪ್ರಕಾರ ಮೃತ ಯುವಕನನ್ನು ಕನ್ಯಾನ ಗ್ರಾಮದ ನಿವಾಸಿ ಗಣೇಶ ಬಂಗೇರ ಎಂದು ಗುರುತು ಹಿಡಿಯಲಾಗಿದೆ.
ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಮಾಣಿಯಿಂದ ಬುಡೋಳಿಗೆ ಸಾಗುತ್ತಿದ್ದ ಆಕ್ಟೀವಾ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಈ ಅಪಘಾತ ದಲ್ಲಿ ದ್ವಿಚಕ್ರ ಸವಾರನ ತಲೆ ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Post a Comment