ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾವ್ಯಾ ಹೆಬ್ಬಾರ್ ಅವರಿಗೆ ಡಾಕ್ಟರೇಟ್ ಪದವಿ

ಕಾವ್ಯಾ ಹೆಬ್ಬಾರ್ ಅವರಿಗೆ ಡಾಕ್ಟರೇಟ್ ಪದವಿ

 



ಪುತ್ತೂರು: ಕರ್ನಾಟಕ ಬ್ಯಾಂಕ್‍ನ ನಿವೃತ್ತ ಪ್ರಬಂಧಕ ಪುತ್ತೂರಿನ ಕೆ. ಮೋಹನ ಹೆಬ್ಬಾರ್ ಹಾಗೂ ಸುಗುಣ ಹೆಬ್ಬಾರ್ ದಂಪತಿ ಪುತ್ರಿ, ಬೆಂಗಳೂರಿನ ಕೆಎಲ್‍ಇ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಕಾವ್ಯಾ ಹೆಬ್ಬಾರ್ ಅವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.


ಇವರು ‘ಲಾ ಅಂಡ್ ಆಕ್ಸೆಸ್ ಟು ಲೈಫ್ ಸೇವಿಂಗ್ ಡ್ರಗ್ಸ್ ಇನ್ ಇಂಡಿಯಾ– ಎ ಕ್ರಿಟಿಕಲ್ ಸ್ಟಡಿ’ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ಬೆಂಗಳೂರು ವಿವಿಗೆ ಪಿಎಚ್‍ಡಿ ಮಹಾಪ್ರಬಂಧವನ್ನು ಸಲ್ಲಿಸಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯದ ಕಾನೂನು ಕಾಲೇಜಿನ ಪ್ರಾಚಾರ್ಯ ಹಾಗೂ ಕಾನೂನು ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ಡಾ.ಸುರೇಶ್ ವಿ ನಾಡಗೌಡರ್ ಅವರು ಕಾವ್ಯಾ ಹೆಬ್ಬಾರ್ ಅವರ ಮಾರ್ಗದರ್ಶಕರು.


ಕಾವ್ಯಾ ಅವರ ಈ ಸಂಶೋಧನೆಯನ್ನು ದೆಹಲಿಯ ಇಂಡಿಯನ್ ಕೌನ್ಸಿಲ್ ಫಾರ್ ಸೋಶಿಯಲ್ ಸೈನ್ಸ್ ರಿಸರ್ಚ್ ಸಂಸ್ಥೆಯು ಫೆಲೋಶಿಪ್‍ಗೆ ಆಯ್ಕೆ ಮಾಡಿ ಅನುದಾನ ನೀಡಿ ಸಹಕರಿಸಿದೆ. ಕಾವ್ಯ ಹೆಬ್ಬಾರ್ ಅವರು ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶರತ್ ಕುಮಾರ್ ಅವರ ಪತ್ನಿ.


0 تعليقات

إرسال تعليق

Post a Comment (0)

أحدث أقدم