"ಸಾಧನೆಗಳ ಸರದಾರ ಅರಸು: "ರಾಜ್ಯದ ರಾಜಕೀಯದಲ್ಲಿ ಆಗಿ ಹೇೂದ ಮಾಜಿ ಮುಖ್ಯಮಂತ್ರಿಗಳಲ್ಲಿ ಸರ್ಕಾರಿ ಮಯಾ೯ದೆಯೊಂದಿಗೆ ಹುಟ್ಟು ಹಬ್ಬ ಆಚರಿಸುತ್ತಿರುವ ಕೀರ್ತಿಗೆ ಪಾತ್ರರಾದವರು ದಿ.ಡಿ.ದೇವರಾಜ ಅರಸು. ಅವರು ಸಾಧನೆಗಳ ಸರದಾರ ಮಾತ್ರವಲ್ಲ ಪಕ್ಷ ಜಾತಿ ಮತಗಳ ಗಡಿ ಮೀರಿ ಬೆಳೆದ ಹೆಗ್ಗಳಿಕೆ ಅರಸು ಅವರಿಗೆ ಸಲ್ಲುತ್ತದೆ. ಹಾಗಾಗಿ ಸಾವ೯ತ್ರಿಕವಾಗಿ ಸಾವ೯ಕಾಲಿಕವಾಗಿ ದೇವರಾಜ ಅರಸರು ಜನಮಾನಸದಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತಾರೆ. ಅ.20ರಂದು ದಿ. ದೇವರಾಜ ಅರಸರ ಜನ್ಮದಿನವನ್ನು ರಾಜ್ಯ ಮಟ್ಟದಲ್ಲಿ ಸರಕಾರದ ಕಾಯ೯ಕ್ರಮವಾಗಿ ಆಚರಿಸಲಾಗುತ್ತಿದೆ.
ಬಾಹ್ಯ ವ್ಯಕ್ತಿತ್ವ: ಆರು ಅಡಿ ಎತ್ತರದ ನಿಲುವು. ದಷ್ಟಪುಷ್ಪ ಮೈಕಟ್ಟು ಕೆಂಪು ಮಿಶ್ರಿತ ಬಿಳಿ ಮೆೈ ಬಣ್ಣ. ತೆಳುವಾಗಿ ಹರಡಿದ ಕಪ್ಪು ಬಿಳುಪು ಕೇಶ.ವಿಶಾಲವಾದ ಹಣೆ. ಹದವಾದ ಮೂಗು ಕರುಣೆಯ ಕಣ್ಣು ಲಕ್ಷಣವಾದ ದೊಡ್ಡ ಕಿವಿಗಳು ವಿಸ್ತಾರವಾದ ಎದೆ ಇದಕ್ಕೆಲ್ಲ ಒಪ್ಪುವ ಖಾದಿ ಜುಬ್ಬ ಗರಿಗರಿ ಮಿಂಚುವ ಪಂಚೆ ನಡಿಗೆಯಲ್ಲಿ ರಾಜ ಗಾಂಭೀರ್ಯ ಹಾದಿಯಲ್ಲಿ ನಡೆದಾಡಿದರು ಅಂದರೆ ಹರೆಯದ ಹುಡುಗಿಯರು ಮಾತ್ರವಲ್ಲ ವಯೇೂವೃದ್ದರು ಒಮ್ಮೆ ನಿಂತು ನೇೂಡ ಬೇಕು, ಅಂತಹ ಸುಂದರ ಬಾಹ್ಯ ವ್ಯಕ್ತಿತ್ವ ನಮ್ಮ ಅರಸರದ್ದು.
ಅವರ ಆಂತಯ೯ ವ್ಯಕ್ತಿತ್ವವೂ ಅಷ್ಟೇ ದಿನದಲಿತರಿಗಾಗಿ ಮಿಡಿಯುವ ಹೂವಿನಂತಹ ಮೃದು ಹೃದಯ. ಹೊಸತನ್ನು ಯೇೂಚಿಸುವ ಪ್ರಯೇೂಗಿಸುವ ಪ್ರಯೇೂಗ ಶೀಲತೆ. ವಿರೇೂಧಿಗಳ ಉತ್ತಮ ಗುಣವನ್ನು ಕಂಡು ಕೊಂಡಾಡುವ ಹೃದಯವಂತಿಕೆ ಅರಸರದ್ದು. ಛಲದಲ್ಲಿಯೆ ಬೆಳೆದು ಛಲದಲ್ಲಿಯೆ ಉಸಿರಾಡಿ ಛಲದಲ್ಲಿಯೇ ಮರಣವನ್ನಪ್ಪಿದ ಛಲದಂಕ ಮಲ್ಲ ಅನ್ನಿಸಿಕೊಂಡವರು ದೇವರಾಜ ಅರಸರು.
ಅರಸರ ಆಡಳಿತ ಪ್ರಯೇೂಗ ಶೀಲತೆ: ರಾಜ್ಯದ ಯಾವುದೇ ಮುಖ್ಯಮಂತ್ರಿಗಳನ್ನು ಮೀರಿಸಬಲ್ಲ ಗುಣ ಅವರಿಗೆ ಬಂದಿದ್ದರೆ ಅದಕ್ಕೆ ಮುಖ್ಯ ಕಾರಣ ಅವರ ಪ್ರಯೇೂಗಶೀಲತೆ. ರಾಜಕೀಯ ಇಚ್ಛಾ ಶಕ್ತಿ.ಬಡ ರೆೈತರ ಶೇೂಷಿತರ ಕಷ್ಟ ಕಾಪ೯ಣ್ಯ ನಿರುದ್ಯೋಗಿಗಳ ಬವಣೆ ನಿಗ೯ತಿಕ ಮಹಿಳೆಯರ ಒಡಲಾಳದ ಧ್ವನಿ ನಿತ್ಯವೂ ಕಂಡು ಉಂಡ ಅನುಭವ ಅವರಿಗಿತ್ತು.
ಈ ದಿಕ್ಕಿನಲ್ಲಿ ಅರಸು ಬಿಟ್ಟ ಬಾಣಗಳೆಲ್ಲವೂ ಸರಿಯಾದ ದಿಕ್ಕಿನಲ್ಲಿ ತಲುಪಿ ರಾಜ್ಯದ ದಿಕ್ಕನ್ನೇ ಬದಲಾಯಿಸಿತು. ಉಳುವವನೇ ಹೊಲದೊಡೆಯ ಹಾವನೂರ ವರದಿ ಹಿಂದುಳಿದ ವಗ೯ಕ್ಕೆ ಮೀಸಲಾತಿ ವೃದ್ದಾಪ್ಯ ವೇತನ ಜನತಾ ಮನೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನಿರುದ್ಯೋಗಿಗಳಿಗೆ ಸ್ಟೆೆೈಫೆಂಡರಿ ಕನಾ೯ಟಕ ರಾಜ್ಯವಾಗಿ ನಾಮಕರಣ ಆಡಳಿತ ಭಾಷೆಯಾಗಿ ಕನ್ನಡ ಹೀಗೆ ಹತ್ತು ಹಲವು ಯೇೂಜನೆಗಳನ್ನು ಸಮಪ೯ಕವಾಗಿ ಜನರಿಗೆ ತಲುಪಿಸುವಲ್ಲಿ ಆಡಳಿತದಲ್ಲಿ ದಕ್ಷತೆಯನ್ನು ಕಾಣುವಲ್ಲಿ ಅರಸರದ್ದು ಮಾದರಿ ಸರಕಾರ ಅನ್ನುವ ಕೀತಿ೯ಗೂ ಭಾಜನವಾಗಿತ್ತು.
ಅರಸರವರು ಸಾಹಿತ್ಯ ಶಿಕ್ಷಣ ಪ್ರೇಮಿ ಅಂದ ಮೇಲೆ ಅವರ ಇನ್ನೊಂದು ರಸಿಕತನದ ಮುಖದ ಪರಿಚಯವೂ ಆಗಲೇ ಬೇಕು. ಅವರ ಧೆೈರ್ಯ ಔದಾರ್ಯ ಪ್ರಜಾ ವಾತ್ಸಲ್ಯ ಕ್ಷಾತ್ರ ಗುಣದ ಜತೆಗೆ ರಸಿಕತೆ ಮದಿರೆ ಮಾನಿನಿಯರ ವ್ಯಾಮೋಹ ದೌರ್ಬಲ್ಯವುಾ ಸೇರಿ ಕೆುಾಂಡಿದೆ ಅನ್ನುವುದು ಅವರನ್ನು ಹತ್ತಿರದಿಂದ ಕಂಡವರ ಮಾತು.ಅವರ ಒಡನಾಡಿಗಳು ಹೇಳುವಂತೆ "ಅರಸರದ್ದು ಮೆೈಯಲ್ಲಾ ಬಂಗಾರವಂತೆ ಕಿವಿ ಮಾತ್ರ ಹಿತ್ತಾಳೆಯಂತೆ."
ಆದರೂ ನಮ್ಮ ಅರಸರಿಗೆ ಕ್ಷಮೆಯಿದೆ ಯಾಕೆಂದರೆ ಇದರಿಂದಾಗಿ ಅವರಿಗೆ ನಷ್ಟವಾಗಿದೆ ಬಿಟ್ಟರೆ ಬೇರೆಯವರಿಗೆ ಸಮಾಜಕ್ಕೆ ಸ್ವಲ್ಪವುಾ ನಷ್ಟವಾಗಿಲ್ಲ. ಅವರ ಸಾಧನೆಗಳ ಮುಂದೆ ಇದೆಲ್ಲವೂ ಗೌಣವಾಗಿ ಬಿಡುತ್ತದೆ.
ದಿ. ದೇವರಾಜ ಅರಸರು ಇಂದಿಗೂ ಎಂದಿಗೂ ಈ ಸಮಾಜದ ಆಸ್ತಿ. ಜಾತಿ ಪಕ್ಷ ಪ್ರಾದೇಶಿಕತೆ ಮೀರಿದ ಅವರ ಬದುಕು ಸಾಧನೆ ಚಿಂತನೆಗಳನ್ನು ಮನನ ಮಾಡಿ ಮೆೈಗೂಡಿಸಿ ಕೊಳ್ಳ ಬೇಕಾದದ್ದು ನಮ್ಮೆಲ್ಲರ ಕತ೯ವ್ಯವೂ ಹೌದು.
-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق