ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ತೋನ್ಸೆ ಸಾಂಸ್ಕೃತಿಕ ಕೇಂದ್ರದಿಂದ ಕನ್ನಡ ಕಾವ್ಯ ಕಮ್ಮಟ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ತೋನ್ಸೆ ಸಾಂಸ್ಕೃತಿಕ ಕೇಂದ್ರದಿಂದ ಕನ್ನಡ ಕಾವ್ಯ ಕಮ್ಮಟ


ಮಂಗಳೂರು: ತೋನ್ಸೆ ಸಾಂಸ್ಕೃತಿಕ ತರಬೇತಿ ಕೇಂದ್ರ ಕೊಲ್ಯ ಇವರು ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಆಯೋಜಿಸಿದ ಕನ್ನಡ ಕಾವ್ಯ ಕಮ್ಮಟ ಕಾರ್ಯಕ್ರಮವು ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ರವೀಂದ್ರ ಸಭಾಭವನದಲ್ಲಿ ಇತ್ತೀಚೆಗೆ ಜರಗಿತು. ರಾಜ್ಯ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಕಮ್ಮಟ ಉದ್ಘಾಟಿಸಿದರು.


'ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ವಿಚಾರಗಳು ಮನುಷ್ಯನ ಜೀವನಾನುಭವಕ್ಕೆ ಪ್ರೇರಕ ಶಕ್ತಿ. ಎಳೆಯ ತಲೆಮಾರಿಗೆ ಆ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ಆಗಬೇಕು'ಎಂದವರು ತಮ್ಮ ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.


ಕನ್ನಡದ ಕಾಯಕ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಮಾತನಾಡಿ 'ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಕಾಯಕ ವರ್ಷ ಎಂಬ ಯೋಜನೆಯಡಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಶ್ಲಾಘನೀಯ ವಾದುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಇದನ್ನು ಗಮನಿಸಿ ಪ್ರಾಧಿಕಾರವು ಪ್ರೋತ್ಸಾಹಿಸಬೇಕು. ಕನ್ನಡದ ಕಾಯಕಕ್ಕೆ ನಾವೆಲ್ಲ ಕಟಿಬದ್ಧರಾಗಬೇಕೆಂಬ ಕರೆಯನ್ನು ತಲೆಮಾರಿಂದ ಕವಿಗಳು ನೀಡುತ್ತಾ ಬಂದಿದ್ದಾರೆ' ಎಂದರು. ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷೆ ರೊ.ರೂಪಾ ಶೆಟ್ಟಿ, ವಿಜಯ ಬ್ಯಾಂಕ್ ನಿವೃತ್ತ ಚೀಫ್ ಮ್ಯಾನೇಜರ್ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು.  


ಉಪನ್ಯಾಸ: ಕಾವ್ಯ ಕಮ್ಮಟಕ್ಕೆ ಸಂಬಂಧಿಸಿ ಕನ್ನಡದ ಭಾಷೆಯ ಶಾಸ್ತ್ರೀಯತೆ, ಕಾವ್ಯಾನುಸಂಧಾನಕ್ಕೆ ಬೇಕಾದ ಛಂದಸ್ಸು ಮತ್ತು ಪ್ರಾಸದ ಕುರಿತಾಗಿ ಡಾ. ದಿನಕರ ಎಸ್. ಪಚ್ಚನಾಡಿ ಹಾಗೂ ಕವಿತೆಯ ಗುಣಲಕ್ಷಣಗಳ ಮೇಲೆ ಡಾ. ಅರುಣ್ ಉಳ್ಳಾಲ್ ಉಪನ್ಯಾಸ ನೀಡಿದರು.


ತೋನ್ಸೆ ಸಾಂಸ್ಕೃತಿಕ ತರಬೇತಿ ಕೇಂದ್ರದ ನಿರ್ದೇಶಕ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪನ್ಯಾಸಕ ಸುನೀಲ್ ಪಲ್ಲಮಜಲು ನಿರೂಪಿಸಿ ವಂದಿಸಿದರು. ಕೋವಿಡ್ ನಿಯಮಾನುಸಾರ ಸೀಮಿತ ಶಿಬಿರಾರ್ಥಿಗಳನ್ನೊಳಗೊಂಡು ನಡೆದ ಕಾವ್ಯ ಕಮ್ಮಟವು ಅಂತರ್ಜಾಲದ ಮೂಲಕ ಪ್ರಸಾರವಾಯಿತು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post