ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜನಕೀಯಸೂತ್ರಣ ಯೋಜನೆ @ 25: ವರ್ಷಪೂರ್ತಿ ವಿವಿಧ ಕಾರ್ಯಕ್ರಮ- ಎಣ್ಮಕಜೆ ಪಂಚಾಯತ್ ನಿರ್ಧಾರ

ಜನಕೀಯಸೂತ್ರಣ ಯೋಜನೆ @ 25: ವರ್ಷಪೂರ್ತಿ ವಿವಿಧ ಕಾರ್ಯಕ್ರಮ- ಎಣ್ಮಕಜೆ ಪಂಚಾಯತ್ ನಿರ್ಧಾರ


ಪೆರ್ಲ: ರಾಜ್ಯ ಸರಕಾರ 1996ರಲ್ಲಿ ಆರಂಭಿಸಿದ ಜನಕೀಯಸೂತ್ರಣ ಪದ್ಧತಿಯ ರಜತ ವರ್ಷಾಚರಣೆಯ ಅಂಗವಾಗಿ ರಾಜ್ಯ ಮಟ್ಟದಲ್ಲಿ ಒಂದು ವರ್ಷ ಕಾಲ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.  ಇದರಂತೆ ಎಣ್ಮಕಜೆ ಪಂಚಾಯತಿನಲ್ಲೂ ವಿಪುಲವಾದ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.


ಆ. 17ರಂದು ರಾಜ್ಯ ಮಟ್ಟದ ಉದ್ಘಾಟನೆಯ ಜತೆಗೆ ಪಂಚಾಯತು ಮಟ್ಟದ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗುತ್ತದೆ. ಈ ಬಗ್ಗೆ ಪಂಚಾಯತ್ ಸಭಾಂಗಣದಲ್ಲಿ ನಡೆದ ಸ್ವಾಗತ ಸಮಿತಿ  ರಚನಾ ಸಭೆಯು ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರ ಅಧ್ಯಕ್ಷತೆಯಲ್ಲಿ ಜರಗಿತು.


ಜನಕೀಯಸೂತ್ರಣ ರಜತ ವರ್ಷಾಚರಣೆಯ ಅಂಗವಾಗಿ ಕಳೆದ 25 ವರ್ಷ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷ ಹಾಗೂ ವಾರ್ಡ್ ಸದಸ್ಯರಿಗೆ ಗೌರವಾಭಿನಂದನೆ ಸಲ್ಲಿಸಲು, ಜನಕೀಯಸೂತ್ರಣ ಬಗ್ಗೆ ವಿಶೇಷ ಉಪನ್ಯಾಸ, ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಸೌದಾಭಿ ಹನೀಫ್, ಪಂ.ಸದಸ್ಯರಾದ ಮಹೇಶ್ ಭಟ್, ಶಶಿಧರ್, ಇಂದಿರಾ, ರಾಮಚಂದ್ರ ಎಂ, ನರಸಿಂಹ ಪೂಜಾರಿ, ರೂಪವಾಣಿ ಭಟ್, ಕುಸುಮಾವತಿ.ಬಿ, ಝರಿನಾ ಮುಸ್ತಾಫ, ಉಷಾ ಗಣೇಶ್, ಆಶಾಲತಾ ಹಾಗೂ ಪಂ.ಕಾರ್ಯದರ್ಶಿ ಅಚ್ಚುತ ಮಣಿಯಾಣಿ, ಹೆಡ್ ಕ್ಲಾರ್ಕ್ ಪ್ರೇಮ್ ಚಂದ್, ವಿವಿಧ ಪಕ್ಷ ಸಂಘಟನೆಗಳ ನೇತಾರರಾದ ಅಬ್ಬುಬಕ್ಕರ್ ಪೆರ್ದನೆ, ವಿನೋದ್ ಪೆರ್ಲ, ಪಿ.ಎಸ್. ಕಡಂಬಳಿತ್ತಾಯ, ವ್ಯಾಪಾರಿ ಏಕೋಪನ ಸಮಿತಿಯ ರಾಮ್ ಭಟ್ ಮೊದಲಾದವರು ಭಾಗವಹಿಸಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post