ಪುತ್ತೂರು: 2021ನೇ ಸಾಲಿನ ಜೆಇಇ ಮೈನ್ಸ್ ಮೂರನೇ ಹಂತದ ಅರ್ಹತಾ ಸುತ್ತಿನ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿರುತ್ತಾರೆ. ವಿದ್ಯಾರ್ಥಿಗಳಾದ ಚಿನ್ಮಯಿ (96.67), ಸಿಂಚನಾಲಕ್ಷ್ಮಿ (94.65), ಅವನೀಶ ಕೆ (93.58), ಗಣೇಶಕೃಷ್ಣ ಬಿ (92.40), ಪ್ರೀತಂ ಜಿ (88.58), ಅಭಿರಾಮ್ ಯು (87.14) ಪರ್ಸಂಟೈಲ್ ಅಂಕ ಗಳಿಸಿದ್ದಾರೆ.
ಒಟ್ಟು ನಾಲ್ಕು ಬಾರಿ ಪರೀಕ್ಷೆ ಬರೆಯಲು ಎನ್‌ಟಿಎ ಅವಕಾಶ ಮಾಡಿಕೊಟ್ಟಿದ್ದು ವಿದ್ಯಾರ್ಥಿಗಳು ಮೂರನೇ ಹಂತದ ಪರೀಕ್ಷೆಯಲ್ಲೂ ಕೂಡ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಈ ಫಲಿತಾಂಶವು ಅತ್ಯಂತ ಆಶಾದಾಯಕವಾಗಿದ್ದು ಕಾಲೇಜಿನ ವಿದ್ಯಾರ್ಥಿಗಳು ನಿರಂತರ ವರ್ಷಗಳಲ್ಲಿ ಜೆಇಇ ಅರ್ಹತೆಯನ್ನು ಪಡೆಯುತ್ತಿದ್ದು ಪ್ರಸಕ್ತ ಸಾಲಿನಲ್ಲೂ ಈ ವಿದ್ಯಾರ್ಥಿಗಳು ಪ್ರಶಂಸನೀಯ ಸಾಧನೆಯನ್ನು ಮಾಡಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
إرسال تعليق