ಮಂಗಳೂರು: 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಛೇರಿಯಲ್ಲಿ ಭಾನುವಾರ ಗೃಹರಕ್ಷಕದಳದ ಸಿಬ್ಬಂದಿ ಹಾಗೂ ಗೃಹರಕ್ಷಕ /ಗೃಹರಕ್ಷಕಿಯರ ಮಕ್ಕಳಿಗೆ ಭಾಷಣ ಮತ್ತು ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯ ತೀರ್ಪುಗಾರರಾಗಿ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರೊಫೆಸರ್ ಸುರೇಶ್ ನಾಥ್, ಸಂತೋಷ್ ಪೀಟರ್, ನ್ಯಾಯವಾದಿ ಹಾಗೂ ರೆಡ್‍ಕ್ರಾಸ್ ಸಂಸ್ಥೆಯ ಸದಸ್ಯರು ಇವರುಗಳು ಉಪಸ್ಥಿತರಿದ್ದರು.
ಈ ಸ್ಪರ್ಧೆಯು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಶುಭಕೋರುತ್ತ, ಸ್ವರ್ಧೆಯಲ್ಲಿ ವಿಜೇತರಾಗುವುದು ಮುಖ್ಯವಲ್ಲ, ಧೈರ್ಯದಿಂದ ಮುಂದೆ ಬಂದು ಭಾಗವಹಿಸುವುದು ಮುಖ್ಯ ಎಂದು ನುಡಿದರು.
ದೇಶಭಕ್ತಿ ಗೀತೆಯಲ್ಲಿ ಪ್ರಥಮ ಬಹುಮಾನ ನಿಧಿ.ಜಿ, 7ನೇ ತರಗತಿ, ಕೆನರಾ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ, ದ್ವಿತೀಯ ಬಹುಮಾನ ಸಪ್ನಾ 5ನೇ ತರಗತಿ, ಫ್ರಾನ್ಸಿಸ್ ಪ್ರೈಮರಿ ಸ್ಕೂಲ್ ಬಿಜೈ, ತೃತೀಯ ಬಹುಮಾನ ವೈಷ್ಣವಿ 9ನೇ ತರಗತಿ ಪದವು ಆಂಗ್ಲ ಮಾಧ್ಯಮ ಶಾಲೆ ನಂತೂರು ಇವರುಗಳಿಗೆ ನೀಡಲಾಯಿತು. ಸಮಾಧಾನಕರ ಬಹುಮಾನವನ್ನು ರಕ್ಷಾ, ಶ್ರೀಶ, ಮಧುಮಿತ, ರಿಯಾ ಫಾತಿಮ ಇವರಿಗೆ ನೀಡಲಾಯಿತು.
ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಶ್ರೀಶ, 3ನೇ ತರಗತಿ ಸೈಂಟ್ ಮೇರಿಸ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್, ದ್ವಿತೀಯ ಬಹುಮಾನ ಆಕಾಶ್ 8ನೇ ತರಗತಿ, ಲೂರ್ಡ್ಸ್ ಹೈಸ್ಕೂಲ್ ಬಿಜೈ, ತೃತೀಯ ಬಹುಮಾನ ಶ್ರೀನಿಧಿ 9ನೇ ತರಗತಿ, ಎಸ್ ಎಸ್ ಪ್ರೌಢಶಾಲೆ ಸುಬ್ರಹ್ಮಣ್ಯ. ಇವರುಗಳಿಗೆ ನೀಡಲಾಯಿತು. ಹಾಗೂ ಸಮಾಧಾನಕರ ಬಹುಮಾನವನ್ನು ಗಾಯತ್ರಿ, ನಿಧಿ, ವೈಷ್ಣವಿ ಇವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಘಟಕದ ಘಟಕಾಧಿಕಾರಿ, ಮಾರ್ಕ್‍ಶೇರ್ ವಂದಿಸಿದರು. ಹಾಗೂ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್ ಹಾಗೂ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment