ಪುತ್ತೂರು: ಬಾವಿಯಿಂದ ನೀರು ಸೇದುವ ವೇಳೆಯಲ್ಲಿ ಆಯತಪ್ಪಿ ಬಾವಿಗೆ ಬಿದ್ದ ಹೆಂಡತಿಯನ್ನು ರಕ್ಷಿಸಲು ಇಳಿದ ಗಂಡನೂ ಬಾವಿಯಲ್ಲೇ ಬಾಕಿಯಾದ ಘಟನೆಯೊಂದು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಎಂಬಲ್ಲಿ ನಡೆದಿದೆ.
ನಿನ್ನೆ ಮುಂಜಾನೆ ಸುನಂದಾ ಅವರು ನೀರು ಸೇದಲೆಂದು ಬಾವಿಯ ಸಮೀಪ ತೆರಳಿದ್ದರು.
ಈ ವೇಳೆ ಅವರು ಆಕಸ್ಮಿಕವಾಗಿ ಸುಮಾರು 60 ಅಡಿ ಆಳದ ಬಾವಿಗೆ ಬಿದ್ದಿದ್ದರು. ಅವರನ್ನು ರಕ್ಷಿಸಲೆಂದು ಪತಿ ಸದಾಶಿವ ರೈ ಅವರು ಬಾವಿಗೆ ಇಳಿದಿದ್ದರು.
ಪತ್ನಿಯನ್ನು ನೀರಿನಿಂದ ಮೇಲೆತ್ತಿ ರಕ್ಷಣೆ ಮಾಡಿದ್ದರೂ ಅವರನ್ನು ಬಾವಿಯಿಂದ ಮೇಲಕ್ಕೆತರಲು ಸಾಧ್ಯವಾಗದೆ ಇಬ್ಬರೂ ಬಾವಿಯಲ್ಲಿದ್ದ ಕಲ್ಲು ಹಿಡಿದುಕೊಂಡು ನಿಂತಿದ್ದರು.
ಈ ಬಗ್ಗೆ ಮಾಹಿತಿ ತಿಳಿದ ಪುತ್ತೂರು ಅಗ್ನಿಶಾಮಕ ದಳದ ಠಾಣಾಧಿಕಾರಿ ರುಕ್ಕಯ್ಯ ಗೌಡ, ಸಿಬ್ಬಂದಿ ಮಂಜುನಾಥ, ಚಾಲಕ ಮೋಹನ್ ಜಾದವ್, ಗೃಹರಕ್ಷಕ ದಳದ ಚಂದ್ರ ಕುಮಾರ್ ತಕ್ಷಣವೇ ಸ್ಥಳಕ್ಕೆ ಆಗಮಿಸಿ ದಂಪತಿಗಳ ರಕ್ಷಣೆ ಮಾಡಿದರು.
إرسال تعليق