ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂoತಾರು ರವರು ಮಂಗಳೂರಿನ ಬೀಚ್ ಗಳಾದ ಸಸಿಹಿತ್ಲ್ ಬೀಚ್, ತಣ್ಣೀರುಭಾವಿ ಬೀಚ್, ಸುರತ್ಕಲ್ ಬೀಚ್, ಫಾತಿಮಾ ಬೀಚ್, ಪಣಂಬೂರು ಬೀಚ್ ಗಳಿಗೆ ಭಾನುವಾರ ಭೇಟಿ ನೀಡಿದರು.
ಅಲ್ಲಿ ಬೀಚ್ ಗಾರ್ಡ್‌ಗಳಾಗಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರನ್ನು ಭೇಟಿ ಮಾಡಿ, ರಜಾ ದಿನಗಳಲ್ಲಿ ಬರುವ ಪ್ರವಾಸಿಗರನ್ನು ಮತ್ತು ಸ್ಥಳೀಯರನ್ನು ನೋಡಿಕೊಳ್ಳುವಂತೆ ಸಲಹೆ ನೀಡಿದರು.
ಈ ವರೆಗೆ ಒಟ್ಟು 8 ಬೀಚ್ ಗಳಲ್ಲಿ 16 ಗೃಹರಕ್ಷಕರನ್ನು ಬೀಚ್ ಗಾರ್ಡ್‌ಗಳಾಗಿ ನೇಮಿಸಲಾಗಿದೆ. ಈ ಸಂದರ್ಭದಲ್ಲಿ ಸುರತ್ಕಲ್ ಘಟಕದ ಘಟಕಾಧಿಕಾರಿ ರಮೇಶ್ ಮತ್ತು ಗೃಹರಕ್ಷಕರು ಉಪಸ್ಥಿತರಿದ್ದರು.
إرسال تعليق