ಮಂಗಳೂರು: ಇನೋಳಿ ದೇವಂದಬೆಟ್ಟ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಗೃಹರಕ್ಷಕ ದಳದಿಂದ ಸ್ವಚ್ಛತಾ ಶ್ರಮದಾನ, ಬಿಲ್ವಪತ್ರೆ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಠ ಡಾ.ಮುರಳೀ ಮೋಹನ್ ಚೂಂತಾರು, ಹಿಂದೆಯೂ ದೇವಸ್ಥಾನದ ಪರಿಸರ ಸ್ವಚ್ಛತಾ ಕೆಲಸ ನಡೆಸಲಾಗಿದ್ದು ಇದೀಗ ಸ್ವಚ್ಛತೆ ಜೊತೆಗೆ ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯ ಗಿಡಗಳನ್ನು ನೆಡುವ ಮೂಲಕ ದೇವರ ಸೇವೆ ಮಾಡುತ್ತಿದ್ದೇವೆ. ಮುಂದೆಯೂ ಅವಕಾಶ ಸಿಕ್ಕಾಗ ಇನ್ನಷ್ಟು ಸೇವೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಮಾತನಾಡಿ, ಈ ದೇವಸ್ಥಾನದಲ್ಲಿ ಸೇವ ಸಲ್ಲಿಸಲು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಬರುತ್ತಲೇ ಇರುತ್ತಾರೆ. ಮೂರು ವರ್ಷಗಳ ಹಿಂದೆಯೂ ಗೃಹರಕ್ಷಕ ದಳದವರು ಬಂದು ಶ್ರಮದಾನ ನಡೆಸಿದ್ದು, ಈಗ ಎರಡನೇ ಬಾರಿ ಬಂದಿರುವುದು ಸಂತಸವಾಗಿದೆ. ಮುಂದೆಯೂ ಅಗತ್ಯ ಸಹಕಾರ ನೀಡುವ ಮೂಲಕ ದೇವಸ್ಥಾನದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ಪರಿಸರ ಪ್ರೇಮಿಗಳಾದ ಮಾಧವ ಉಳ್ಳಾಲ್, ರಾಕೇಶ್, ದೇವಸ್ಥಾನದ ಕಾರ್ಯದರ್ಶಿ ಶ್ರೀನಿವಾಸ ಇನೋಳಿ, ಟ್ರಸ್ಟಿಗಳಾದ ಗೋಪಾಲ ಶೆಟ್ಟಿ ಬಾರ್ಲ, ಪ್ರಭಾಕರ ನಾಯಕ್, ಸೇವಾ ಸಮಿತಿಯ ಸದಸ್ಯರಾದ ಕಿರಣ್ ಶೆಟ್ಟಿ ಕಿಲ್ಲೂರು ಲಕ್ಕೆ, ಗೋಪಾಲ ಕೋರ್ಯ, ಸಂದೇಶ ಪೊರ್ಸೋಟ, ಪ್ರವೀಣ್, ಕರುಣಾಕರ ಶೆಟ್ಟಿ ದೇವರಗುಡ್ಡೆ, ಸುಜಿತ್ ಇನೋಳಿ, ಘಟಕಾಧಿಕಾರಿ ಭಾಸ್ಕರ್, ಸುನಿಲ್ ಮೊದಲಾದವರು ಉಪಸ್ಥಿತರಿದ್ದರು.
ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ ಪಜೀರುಗುತ್ತು ಸ್ವಾಗತಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق