ಗಾಜಿಯಾಬಾದ್: ಬಾಲ್ಕನಿಯಲ್ಲಿ ಸಿಲುಕಿದ್ದ ನಾಯಿಮರಿಯನ್ನು ರಕ್ಷಿಸಲು ಹೋಗಿ 12 ವರ್ಷದ ಬಾಲಕಿ 9ನೇ ಮಹಡಿಯಿಂದ ಬಿದ್ದು ಮೃತಪಟ್ಟ ಆಘಾತಕಾರಿ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಸಂಭವಿಸಿದೆ.
7ನೇ ತರಗತಿ ವಿದ್ಯಾರ್ಥಿನಿ ಜ್ಯೋತ್ಸನಾ ಮೃತಪಟ್ಟ ದುರ್ದೈವಿ. ಈಕೆ ಮನೆಯೊಳಗೆ ನಾಯಿಮರಿ ಜೊತೆ ಆಟವಾಡುತ್ತಿದ್ದಳು.
ಈ ವೇಳೆಯಲ್ಲಿ ನಾಯಿಮರಿ ಬಾಲ್ಕನಿಯ ಕಿಟಕಿಗೆ ಹಾಕಿದ್ದ ನೆಟ್ ಒಳಗೆ ಸಿಲುಕಿಕೊಂಡಿತ್ತು. ನೆಟ್ ಬಿಡಿಸುವಾಗ ಆಯತಪ್ಪಿ ಮಹಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾಳೆ.
ತಾಯಿ ಕಿರಣ್ ಮನೆಯೊಳಗೆ ಇದ್ದು ಅಡುಗೆ ಮಾಡುತ್ತಿದ್ದರು. ಮಗು ಕಿರುಚಿದ ಶಬ್ಧ ಕೇಳಿ ಓಡಿ ಬರುವಷ್ಟರಲ್ಲಿ ದುರಂತ ಸಂಭವಿಸಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ತಿಳಿದು ಬಂದಿದೆ.
Post a Comment