ಗೋವು- ಜಗತ್ತ್‌ದಪ್ಪೆ- ಗೋ ಏಳ್ಕಥೆ ಸಪ್ತಾಹ ಸಮಾರೋಪ
ಚಿತ್ರ: ಮಧುಸೂದನ ಅಲೆವೂರಾಯ
ಮಂಗಳೂರು: ಕೃಷಿ ಆಧಾರಿತ ಬದುಕಿಗೆ ಗೋವು ಕಾರಣ. ಋಷಿಗಳು ಗೋವನ್ನು ಪೂಜಿಸುತ್ತಾ, ಆರಾಧಿಸುತ್ತಾ ಬೆಳವಣಿಗೆಯನ್ನು ಕಂಡರು. ಬದುಕನ್ನು ಪಾವನಗೊಳಿಸಿಕೊಂಡರು. ರಾಷ್ಟ್ರಕ್ಕೊಂದು ಶ್ರೇಷ್ಠ ಪರಂಪರೆಯನ್ನು ಹಾಕಿಕೊಟ್ಟರು. ನಾವೀಗ ನಮ್ಮ ಮುಂದಿನ ಪೀಳಿಗೆಗೆ ಗೋವಿನ ಮಹತ್ವವನ್ನು ತಿಳಿಸುತ್ತಾ, ಗೋಸಾಕಣೆ ಮಾಡುತ್ತ, ಗೋ ಉತ್ಪನ್ನಗಳ ಬಗ್ಗೆ ತಿಳಿಸಿಕೊಡಬೇಕಾಗಿದೆ ಎಂದು ಗೋವನಿತಾಶ್ರಯ ಟ್ರಸ್ಟ್‌ನ ಕಾರ್ಯದರ್ಶಿ, ಇತಿಹಾಸ ತಜ್ಞ, ನಿವೃತ್ತ ಉಪನ್ಯಾಸಕ ಪ್ರೊ ಪಿ.ಎ ಭಟ್ ಹೇಳಿದರು.
ನಗರದ ತುಳುಭವನದಲ್ಲಿ ನಡೆದ 'ಗೋವು ಜಗತ್ತ್‌ದಪ್ಪೆ- ಗೋ-ಏಳ್ಕಥೆ' ಎಂಬ ಸಪ್ತಾಹದ ಸಮಾರೋಪದಲ್ಲಿ ಅವರು ಮಾತನಾಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲಸಾರ್ ಅಧ್ಯಕ್ಷತೆ ವಹಿಸಿದ್ದರು.
ಕ್ಷೇಮ ಸಂಸ್ಥೆಯ ಮನಃಶಾಸ್ತ್ರ ಚಿಕಿತ್ಸಾ ವಿಭಾಗದ ಪ್ರಮುಖರಾದ ಡಾ. ಸತೀಶ್ ರಾವ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ಮಹಾನಗರ ಪಾಲಿಕೆ ಸದಸ್ಯ ಕಿರಣ್ ಕುಮಾರ್, ಅಶೋಕ ಶೆಟ್ಟಿ, ತುಳು ಅಕಾಡೆಮಿ ಸದಸ್ಯ ಚೇತಕ್ ಪೂಜಾರಿ, ಮಂಗಳೂರು ಮಹಾನಗರ ಕಾರ್ಯವಾಹ ಮನೋಹರ್, ಅಮರ್ತ್ಯ ಉಪಸ್ಥಿತರಿದ್ದರು.
ಚಿತ್ರ ಕಲಾವಿದ ಪ್ರಶಾಂತ ಆಚಾರ್ಯ, ಛಾಯಾಗ್ರಾಹಕ ಮಧುಸೂದನ ಅಲೆವೂರಾಯ, ರವಿಚಂದ್ರ ಭಟ್ ಅವರನ್ನು ದಯಾನಂದ ಕತ್ತಲಸಾರ್ ಗೌರವಿಸಿದರು.
ರವಿ ಅಲೆವೂರಾಯ ವರ್ಕಾಡಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಎಲ್ ನಿಡ್ವಣ್ಣಾಯರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಅಕ್ಷಯ್, ಪ್ರಥಮ್ ರೈ, ಪ್ರಥಮ್ ಅಂಚನ್, ವೃಷಭ್ ಶೆಟ್ಟಿ, ಸಾನ್ವಿ ಬಿ.ಕೆ ಭಾಗವಹಿಸಿದ್ದರು.
ಸಮಾರೋಪದ ಬಳಿಕ ದಯಾನಂದ ಕತ್ತಲಸಾರ್ ಅವರಿಂದ 'ಗೋಕಥೆ' (ಪಾಡ್ದನದ ತಿರ್ಲ್) ಕಾರ್ಯಕ್ರಮ ನಡೆಯಿತು.
Post a Comment