ಪುತ್ತೂರು; ಮಹಾಲಿಂಗೇಶ್ವರ ಯುವಕ ಮಂಡಲ(ರಿ) ಕೊಂಬೆಟ್ಟು, ಪುತ್ತೂರು ಇದರ ವತಿಯಿಂದ ಫಿಟ್ ಇಂಡಿಯಾ ಫ್ರೀಡಮ್ ರನ್ ಕಾರ್ಯಕ್ರಮ
ನೆಹರು ಯುವ ಕೇಂದ್ರ ಮಂಗಳೂರು ಇದರ ಸಂಯೋಗದಲ್ಲಿ ಮಹಾಲಿಂಗೇಶ್ವರ ಯುವಕ ಮಂಡಲ(ರಿ) ಕೊಂಬೆಟ್ಟು,ಪುತ್ತೂರು ಇದರ ವತಿಯಿಂದ Fit India freedom run ಕಾರ್ಯಕ್ರಮ ಪುತ್ತೂರು ಮಹಾಲಿಂಗೇಶ್ವರ ಗದ್ದೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಪುತ್ತೂರು ತಾಲೂಕು ಸಂಯೋಜಕ ಗೌತಮ್ ರಾಜ್ ಕರಂಬಾರು ,ಸಂಯೋಜಕಿಯಾದ ಪ್ರಜ್ಞಾ ಕುಲಾಲ್ ಕಾವು,ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ ಇದರ ಯುವಪರಿವರ್ತಕರಾದ ಶ್ರೀಕಾಂತ್ ಪೂಜಾರಿ ಬಿರಾವು ಉಪಸ್ಥಿತರಿದ್ದರು.
ಮಹಾಲಿಂಗೇಶ್ವರ ಯುವಕ ಮಂಡಲದ ಅಧ್ಯಕ್ಷ ತೇಜಸ್ ಕೊಂಬೆಟ್ಟು, ಉಪಾಧ್ಯಕ್ಷರಾದ ಕೃಷ್ಣಪ್ಪ ಕಂಬಳಕೋಡಿ ಹಾಗೂ ಯುವಕ ಮಂಡಲದ ಕಾರ್ಯದರ್ಶಿ ರಾಜೇಶ್ ಕೊಂಬೆಟ್ಟು,ಸಂಘದ ಪಧಾದಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ತೇಜಸ್ ಕೊಂಬೆಟ್ಟು ಅವರು ಫಿಟ್ ಇಂಡಿಯಾ ಫ್ರೀಡಮ್ ರನ್ ಇದರ ಪ್ರತಿಜ್ಞೆಯನ್ನು ವಾಚಿಸಿದರು. ಸಂಘದ ಗೌರವಾಧ್ಯಕ್ಷರಾದ
ಶ್ರೀಕಾಂತ್ ಕಂಬಳಕೋಡಿ ಕಾರ್ಯಕ್ರಮ ನಿರೂಪಿಸಿದರು. .
ಸಂಘದ ಜೊತೆ ಕಾರ್ಯದರ್ಶಿ ದಿವಾಕರ ಚಿಕ್ಕಪುತ್ತೂರು, ಖಜಾಂಚಿ ಸಂದೀಪ್ ಕಂಬಳಕೋಡಿ, ಸದಸ್ಯರಾದ , ಪ್ರದೀಪ್,ದಿವಾಕರ ಕಂಬಳಕೋಡಿ,ಶಮಂತ್,ತಿಲಕ್ ರಾಜ್ ,ಸಂತೋಷ್, ಕಾರ್ತಿಕ್,ಉದಯಶಂಕರ್, ಸುಕೇಶ್,ಮಾನಸ್ ಉಪಸ್ಥಿತರಿದ್ದರು.
Post a Comment