ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 8 ರಂದು ನಡೆಯಬೇಕಿದ್ದ ಕ್ಯಾಂಪ್ಕೋ ಉದ್ಯೋಗ ನೇಮಕಾತಿ ಪರೀಕ್ಷೆ ಮುಂದೂಡಿಕೆ

8 ರಂದು ನಡೆಯಬೇಕಿದ್ದ ಕ್ಯಾಂಪ್ಕೋ ಉದ್ಯೋಗ ನೇಮಕಾತಿ ಪರೀಕ್ಷೆ ಮುಂದೂಡಿಕೆ

 


ಪುತ್ತೂರು : ಕ್ಯಾಂಪ್ಕೋ ವತಿಯಿಂದ ಆ.8 ರಂದು ನಡೆಯಲಿದ್ದ ನೇಮಕಾತಿ ಪರೀಕ್ಷೆಯನ್ನು ಕೋವಿಡ್ ಕೇಸ್ ಗಳು ಮತ್ತು ರಾಜ್ಯ ಸರಕಾರವು ಹೇರಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. 


ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಏರ್ಪಾಡು ಮಾಡಲಾಗಿತ್ತು. 


ಹಾಗೂ ಬೇರೆ ರಾಜ್ಯಗಳಿಂದ ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗಲಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.


ಮುಂದಿನ ಸೂಚನೆಗಳನ್ನು ಮತ್ತು ಸರಕಾರದ ನಿರ್ಣಯಗಳನ್ನು ಅನುಸರಿಸಿಕೊಂಡು ಪರೀಕ್ಷೆಗಳನ್ನು ನಡೆಸಲು ಪರಿಷ್ಕೃತ ದಿನಾಂಕಗಳನ್ನು ನಿರ್ಧರಿಸಲಾಗುವುದು. 


ಹೆಚ್ಚಿನ ಮಾಹಿತಿಗಳಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಜಾಲತಾಣ (www.campco.org)ವನ್ನು ಸಂದರ್ಶಿಸಬಹುದು ಎಂದು ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم