ಉಜಿರೆ: ಧರ್ಮಸ್ಥಳದ ಎಸ್‌ಡಿಎಂ ಮೆಡಿಕಲ್ ಟ್ರಸ್ಟ್ ಆಶ್ರಯದಲ್ಲಿ ಉಜಿರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‌ಡಿಎಂ ಆಸ್ಪತ್ರೆಯಲ್ಲಿ 13 ಮಂದಿ ತಜ್ಞ ವೈದ್ಯರು ಹಾಗೂ 12 ಮಂದಿ ವೈದ್ಯರು ವಿವಿಧ ವಿಭಾಗಗಳಲ್ಲಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಸೇವೆ ನೀಡುತ್ತಾರೆ. ಅಗತ್ಯವಿದ್ದಲ್ಲಿ ಮಂಗಳೂರಿನಿಂದ ತಜ್ಞ ವೈದ್ಯರ ಸೇವೆಯನ್ನೂ ಬಳಸಿಕೊಳ್ಳಲಾಗುತ್ತದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಂಜನ್ ಕುಮಾರ್ ಹೇಳಿದರು.
ಆರು ತಿಂಗಳುಗಳ ಒಳಗೆ ಒಂದೂವರೆ ಕೋಟಿ ರೂ. ಮೌಲ್ಯದ ಸಿ.ಟಿ. ಸ್ಕ್ಯಾನ್ ಸೌಲಭ್ಯ ಪ್ರಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.
ಆಸ್ಪತ್ರೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವಿಧ ಸೇವಾ ಸೌಲಭ್ಯಗಳ ಬಗ್ಯೆ ಸವಿವರ ಮಾಹಿತಿ ನೀಡಿದರು.
ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಮಾತನಾಡಿ, ಆಸ್ಪತ್ರೆಯಲ್ಲಿ 181 ಹಾಸಿಗೆ ಸೌಲಭ್ಯ, 9 ತುರ್ತು ನಿಗಾ ಘಟಕ, ಹೊರರೋಗಿ ಚಿಕಿತ್ಸಾ ವಿಭಾಗ, ನೇತ್ರಾ ಚಿಕಿತ್ಸಾ ವಿಭಾಗ, ಮೂರು ಅಂಬ್ಯುಲೆನ್ಸ್‍ಗಳು, ಔಷಧಿ ವಿಭಾಗ, ಹೆರಿಗೆ ವಿಭಾಗ ದಿನದ 24 ಗಂಟೆಯೂ ಸೇವೆಗೆ ಲಭ್ಯ ಇರುತ್ತವೆ.
ತುರ್ತು ಸಂದರ್ಭಗಳಲ್ಲಿ ಶವ ಸಾಗಿಸಲು “ಮುಕ್ತಿ” ವಾಹನದ ಉಚಿತ ಸೇವೆ ಇದೆ. ಆಸ್ಪತ್ರೆಯು 26 ವಿಮಾ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ರಿಯಾಯಿತಿ ದರದಲ್ಲಿ ಉತ್ತಮ ಸೇವೆ ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ಸ್ವಚ್ಛತೆ, ಉತ್ತಮ ಗಾಳಿ-ಬೆಳಕು, ಪ್ರಶಾಂತ ಪರಿಸರ ಮತ್ತು ಸೌಜನ್ಯ ಪೂರ್ಣ ಸೇವೆಗೆ ಆದ್ಯತೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08256-295 611, ಸಂಚಾರಿ ದೂರವಾಣಿ: 8105256611
ಡಾ. ಸಾತ್ವಿಕ್ ಜೈನ್, ಪತ್ರಕರ್ತರ ಸಂಘದ ಅಧ್ಯಕ್ಷ ಅಚ್ಚುಶ್ರೀ ಬಾಂಗೇರು, ಕಾರ್ಯದರ್ಶಿ ಜಾರಪ್ಪ ಪೂಜಾರಿ ಉಪಸ್ಥಿತರಿದ್ದರು. ಡಾ. ರಂಜನ್ ಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಸಾರ್ವಜನಿಕ ಸಂಪರ್ಕಾಧಿಕಾರಿ ಸಂಗೀತಾ ಧನ್ಯವಾದವಿತ್ತರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق