ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೃಹರಕ್ಷಕ ಅಬ್ದುಲ್ ರವೂಫ್‍ಗೆ ಸಹಾಯಹಸ್ತ

ಗೃಹರಕ್ಷಕ ಅಬ್ದುಲ್ ರವೂಫ್‍ಗೆ ಸಹಾಯಹಸ್ತ



ಮಂಗಳೂರು: ಬೆನ್ನುಹುರಿಯ ಸಮಸ್ಯೆಯಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಗೃಹರಕ್ಷಕ ಸಿಬ್ಬಂದಿ ಅಬ್ದುಲ್ ರವೂಫ್ ಅವರನ್ನು ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ ಚೂಂತಾರು ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು.


ಅಬ್ದುಲ್ ರವೂಫ್ ಅವರು ಕಳೆದ ಒಂದು ತಿಂಗಳಿನಿಂದ ಬೆನ್ನುಹುರಿಯ ಸಮಸ್ಯೆಯಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಕೆಲಸ ನಿರ್ವಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಮೂಳೆ ತಜ್ಞ ವೈದ್ಯರು ಕಡ್ಡಾಯವಾಗಿ ಒಂದು ತಿಂಗಳು ವಿಶ್ರಾಂತಿಯನ್ನು ಆದೇಶಿಸಿದ್ದರು. ಈಗ ಈ ಗೃಹರಕ್ಷಕನ ನೆರವಿಗೆ ಉಳ್ಳಾಲ ಘಟಕದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಅನಾರೋಗ್ಯ ಪೀಡಿತ  ಅಬ್ದುಲ್ ರವೂಫ್ ಮನೆಗೆ ತೆರಳಿ ಒಂದು ತಿಂಗಳಿಗಾಗುವಷ್ಟು ಅಕ್ಕಿ, ದಿನಸಿ ಸಾಮಾನು ಮತ್ತಿತರ ವಸ್ತುಗಳನ್ನು ನೀಡಿ ಸಾಂತ್ವನದ ಮಾತು ಆಡಿ, ಧೈರ್ಯ ತುಂಬಿದ್ದಾರೆ.


ಅಬ್ದುಲ್ ರವೂಫ್ ಅವರು ಟ್ರಾಫಿಕ್ ಡ್ಯೂಟಿಯಲ್ಲಿ ಪಳಗಿದ್ದು, ಕಳೆದ ಐದು ವರ್ಷಗಳಿಂದ ಮಂಗಳೂರಿನ ಜನನಿಬಿಡ ರಸ್ತೆಗಳಲ್ಲಿ ಟ್ರಾಫಿಕ್ ನಿರ್ವಹಣೆ ಮಾಡಿ ಜನಮನ್ನಣೆ ಗಳಿಸಿರುತ್ತಾರೆ. ಈ ಸಂದರ್ಭದಲ್ಲಿ ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಭಾಸ್ಕರ್ ಎಂ., ಸಮದ್, ಪ್ರಸಾದ್ ಮಂಗಳೂರು ಘಟಕದ ದಿವಾಕರ್, ದುಷ್ಯಂತ್ ರೈ ಮುಂತಾದವರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم