ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಕ್ಕಳಲ್ಲಿ ದೇಶಪ್ರೇಮ, ನೈತಿಕ ಮೌಲ್ಯ ತುಂಬುವ ಹೊಣೆ ಹೆತ್ತವರಿಗಿದೆ: ಸುರೇಶ್ ಶೆಟ್ಟಿ

ಮಕ್ಕಳಲ್ಲಿ ದೇಶಪ್ರೇಮ, ನೈತಿಕ ಮೌಲ್ಯ ತುಂಬುವ ಹೊಣೆ ಹೆತ್ತವರಿಗಿದೆ: ಸುರೇಶ್ ಶೆಟ್ಟಿ

ಅಂಬಿಕಾ ಸಿಬಿಎಸ್‍ಇ ವಿದ್ಯಾಲಯ: ಸ್ವಾತಂತ್ರ್ಯೋತ್ಸವ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ




ಪುತ್ತೂರು: ಮಕ್ಕಳಲ್ಲಿ ದೇಶಪ್ರೇಮ, ನೈತಿಕ ಮೌಲ್ಯಗಳನ್ನು ತುಂಬುವ ಕಾರ್ಯವನ್ನು ಹೆತ್ತವರು ಇಂದು ಮಾಡಬೇಕಿದೆ. ಇದರೊಂದಿಗೆ ಓದಿನ ಹವ್ಯಾಸವೂ ಅತ್ಯಂತ ಮುಖ್ಯ. ಹಾಗಾಗಿ ಪತ್ರಿಕೆ, ಪುಸ್ತಕ, ನಿಯತಕಾಲಿಕೆಗಳನ್ನು ಓದುವೆಡೆಗೆ ಮಕ್ಕಳನ್ನು ಹುರಿದುಂಬಿಸಬೇಕು. ಆ ತೆರನಾದ ವಾತಾವರಣದಲ್ಲಿ ಮಕ್ಕಳು ಬೆಳೆದರೆ ನಾಳೆ ದೇಶಕ್ಕೆ ಅತ್ಯುತ್ತಮ ನಾಗರಿಕರು ದೊರೆತು ದೇಶ ಮತ್ತಷ್ಟು ವೈಭವದ ದಿನಗಳನ್ನು ಕಾಣಬಹುದು ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸದಸ್ಯ ಸುರೇಶ್ ಶೆಟ್ಟಿ ಹೇಳಿದರು.


ಅವರು ಬಪ್ಪಳಿಗೆಯ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿ ಗುರುವಾರ ಮಾತನಾಡಿದರು.


ಸ್ವಾತಂತ್ರ್ಯದ ಹೋರಾಟಕ್ಕೂ ಪುತ್ತೂರಿಗೂ ಅವಿನಾಭಾವ ಸಂಬಂಧವಿದೆ. ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೂ ಪೂರ್ವದಲ್ಲೇ ಪುತ್ತೂರಿನ ಸ್ವಾಭಿಮಾನಿಗಳು ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ್ದರು. 1830ರ ವೇಳೆಗಾಗಲೇ ಪುತ್ತೂರಿನಲ್ಲಿ ಅಂತಹದ್ದೊಂದು ದೇಶಪ್ರೇಮದ ಕೂಗು ಮೊಳಗಿತ್ತೆಂಬುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಚಾರ. ಇಂತಹ ಪವಿತ್ರ ಮಣ್ಣಿನಲ್ಲಿ ಜನಿಸಿದ ನಾವು ನಮ್ಮ ಹಿರಿಯರ ಮತ್ತು ದೇಶದ ಗೌರವವನ್ನು ಎತ್ತಿಹಿಡಿಯುವ ಜವಾಬ್ದಾರಿ ಹೊಂದಿದ್ದೇವೆಂಬುದನ್ನು ಮರೆಯಬಾರದು ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ ಮಾತನಾಡಿ ಪ್ರತಿಯೊಂದು ಚಟುವಟಿಕೆಯೂ ಜೀವನಕ್ಕೊಂದು ಪಾಠ ಕಲಿಸುತ್ತದೆ ಎಂಬುದನ್ನು ನಾವೆಲ್ಲರೂ ಗುರುತಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ವೈಯಕ್ತಿಕ ವಿಕಾಸಕ್ಕಾಗಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸ್ಪರ್ಧಾಸ್ಪೂರ್ತಿಯಿಂದ ಪ್ರತಿಯೊಂದರಲ್ಲೂ ಭಾಗವಹಿಸಿದಾಗ ವ್ಯಕ್ತಿತ್ವ ಅರಳುವುದಕ್ಕೆ ಸಾಧ್ಯ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ವತಿಯಿಂದ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿನ ಭಾಷಣ ಸ್ಪರ್ಧೆ ಹಾಗೂ ವಿದ್ಯಾಲಯದಿಂದ ವತಿಯಿಂದ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸುರೇಶ್ ಶೆಟ್ಟಿ ಬಹುಮಾನ ವಿತರಿಸಿದರು.


ವೇದಿಕೆಯಲ್ಲಿ ವಿದ್ಯಾಲಯದ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಕುಸುಮಾ ಕೆ.ಜೆ ಪ್ರಾರ್ಥಿಸಿ, ಶೈಲಶ್ರೀ ಸ್ವಾಗತಿಸಿದರು. ಶಿಕ್ಷಕಿಯರಾದ ಅನ್ನಪೂರ್ಣ ಹಾಗೂ ಕೃತಿಕ ಬಹುಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕಿ ಸುಚೇತಾ ವಂದಿಸಿದರು. ಶಿಕ್ಷಕಿ ಸುನೀತಾ ಜೆ ರೈ ಕಾರ್ಯಕ್ರಮ ನಿರ್ವಹಿಸಿದರು.


ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ:

ಒಟ್ಟು ಆರು ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಎಲ್‍ಕೆಜಿ ವಿಭಾಗದ ವಿದ್ಯಾರ್ಥಿಗಳಿಗಾಗಿ ನಡೆದ ರಾಷ್ಟ್ರಧ್ವಜಕ್ಕೆ ಬಣ್ಣ ಹಚ್ಚುವ ಸ್ಪರ್ಧೆಯಲ್ಲಿ ದಕ್ಷಾ ಬಿಎಸ್ ಪ್ರಥಮ, ಶಾರ್ವಿ ಕೆ ಎಚ್ ದ್ವಿತೀಯ ಹಾಗೂ ವಿಶ್ಮಾ ತೃತೀಯ ಸ್ಥಾನ ಪಡೆದರು. ಯುಕೆಜಿ ವಿಭಾಗದವರಿಗಾಗಿ ನಡೆದ ಡ್ರಾಯಿಂಗ್ ಸ್ಪರ್ಧೆಯಲ್ಲಿ ಆದ್ಯಂತ್ ಎಂ. ಪ್ರಥಮ, ನಿದರ್ಶ್ ಸಂತೋಷ್ ದ್ವಿತೀಯ ಹಾಗೂ ಆದ್ಯ ಜೆ.ಎನ್ ತೃತೀಯ ಬಹುಮಾನ ಪಡೆದರು.


ಒಂದರಿಂದ ಮೂರನೆಯ ತರಗತಿಯವರೆಗೆ ನಡೆದ ರಾಷ್ಟ್ರಗೀತೆ ಗಾಯನ ಸ್ಪರ್ಧೆಯಲ್ಲಿ ಒಂದನೇ ತರಗತಿಯಲ್ಲಿ ಪರೀಕ್ಷಿತ್ ಎಸ್.ಪಿ ಪ್ರಥಮ, ಶ್ರೀನಿಧಿ ಭಟ್ ದ್ವಿತೀಯ ಹಾಗೂ ಕೀರ್ತಿಕಾ ಎಸ್. ಆಚಾರ್ಯ ತೃತೀಯ ಸ್ಥಾನ ಪಡೆದರೆ, ಎರಡನೆಯ ತರಗತಿಯಲ್ಲಿ ಧನ್ವಿ ಬಿ ಪ್ರಥಮ, ಸ್ವಾಧಿ ಎಸ್ ರೈ ದ್ವಿತೀಯ ಹಾಗೂ ಸಂಹಿತ್ ಜೋಸ್ಸಿ ಲೋಬೋ ತೃತೀಯ ಸ್ಥಾನಕ್ಕೆ ಭಾಜನರಾದರು. ಮೂರನೆಯ ತರಗತಿಯಲ್ಲಿ ಎಂ. ಆದಿಶ್ರೀ ಪ್ರಥಮ, ತನ್ವಿ ನಾಗೇಂದ್ರ ದ್ವಿತೀಯ ಹಾಗೂ ಧ್ರುವ ಬಿ ತೃತೀಯ ಸ್ಥಾನ ಪಡೆದರು.


ನಾಲ್ಕರಿಂದ ಆರನೇ ತರಗತಿಯವರೆಗೆ ನಡೆದ ರಸಪ್ರಶ್ನೆ ಸ್ಪರ್ಧೆ ನಡೆಯಿತು. ನಾಲ್ಕನೆಯ ತರಗತಿಯಲ್ಲಿ ದೀಕ್ಷಿತ್ ಎಸ್ ರಾವ್ ಹಾಗೂ ಸೌಪರ್ಣಿಕಾ ಎಸ್.ಡಿ. ಪ್ರಥಮ, ಪ್ರೇಮ್ ಇ. ಹಾಗೂ ಶ್ರೀರಾಮ್ ಆಚಾರ್ಯ ದ್ವಿತೀಯ ಮತ್ತು ಸ್ಕಂದ ರೈ ಮತ್ತು ಅನ್ವಿತಾ ಎಸ್ ತೃತೀಯ ಸ್ಥಾನ ಪಡೆದರೆ, ಐದನೆಯ ತರಗತಿಯಲ್ಲಿ ಪ್ರಮತ್ ಕಾರ್ತಿಕ್ ಪ್ರಥಮ, ಕಾರ್ಣಿಕ್ ನವೀನ್ ದ್ವಿತೀಯ, ಅನುಷ್ಕಾ ಎನ್, ಸಂಪ್ರೀತ್ ವಂಶಿಕಾ ಬಿ. ರೈ ಹಾಗೂ ಅನರ್ಘ್ಯಶ್ರೀ ಎಚ್. ತೃತೀಯ ಸ್ಥಾನ ಪಡೆದರು. ಆರನೆಯ ತರಗತಿಯಲ್ಲಿ ತನ್ವಿ ಆರ್ ರೈ ಪ್ರಥಮ, ಕರ್ಣಾಶ್ರುತ್ ಪ್ರಭು ಎಚ್. ದ್ವಿತೀಯ ಹಾಗೂ ಮನ್ವಿತ್ ಎನ್. ತೃತೀಯ ಸ್ಥಾನ ಪಡೆದರು.


ಏಳನೆಯ ತರಗತಿಯಿಂದ ಒಂಬತ್ತನೆಯ ತರಗತಿಯವರೆಗೆ ಮುಖಪುಟ ವಿನ್ಯಾಸ ಸ್ಪರ್ಧೆ ನಡೆಯಿತು. ಏಳನೆಯ ತರಗತಿಯಲ್ಲಿ ಆದ್ಯ ಎಂ.ಎ. ಪ್ರಥಮ ಸ್ಥಾನ ಪಡೆದರು. ಎಂಟನೆಯ ತರಗತಿಯಲ್ಲಿ ಖುಷಿ ಪ್ರಥಮ ಸ್ಥಾನ, ಅರುಂಧತಿ ಎಲ್. ಆಚಾರ್ಯ ದ್ವಿತೀಯ ಸ್ಥಾನ ಹಾಗೂ ಆತ್ರೇಯ ತೃತೀಯ ಸ್ಥಾನ ಪಡೆದರು. ಒಂಬತ್ತನೆಯ ತರಗತಿಯಲ್ಲಿ ಪ್ರಾರ್ಥನಾ ಪ್ರಥಮ ಸ್ಥಾನ, ಆರ್ಯ ದ್ವಿತೀಯ ಸ್ಥಾನ ಹಾಗೂ ರಿಶ್ವಿತ್ ತೃತೀಯ ಸ್ಥಾನ ಪಡೆದರು.


ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಭಾಷಣ ಸ್ಪರ್ಧೆ ಆಯೋಜಿಸಲಾಯಿತು. ಪ್ರಾಥಮಿಕ ಹಂತದಲ್ಲಿ ಆರನೆಯ ತರಗತಿಯ ವೇದಾಂತ್ ಪ್ರಥಮ, ನಾಲ್ಕನೆಯ ತರಗತಿಯ ಮನೀಷಾ ಕಜೆ ದ್ವಿತೀಯ ಹಾಗೂ ನಾಲ್ಕನೆಯ ತರಗತಿಯ ಸೌಪರ್ಣಿಕಾ ತೃತೀಯ ಸ್ಥಾನ ಪಡೆದರು. ಪ್ರೌಢ ವಿಭಾಗದಲ್ಲಿ ಎಂಟನೆಯ ತರಗತಿಯ ಜಸ್ವಿತ್ ಪ್ರಥಮ, ಎಂಟನೆಯ ತರಗತಿಯ ಪ್ರವರ್ಧನ್ ಕೆ.ಪಿ ದ್ವಿತೀಯ ಹಾಗೂ ಎಂಟನೆಯ ತರಗತಿಯ ಯಶಸ್ವಿ ಸುರುಳಿ ತೃತೀಯ ಸ್ಥಾನ ಪಡೆದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم