ವಿಜಯನಗರ: 21 ವರ್ಷದ ಯುವಕನೊಬ್ಬ ಬೈಕ್ಗಾಗಿ ಪ್ರಾಣವನ್ನೇ ಕಳೆದುಕೊಂಡ ಘಟನೆಯೊಂದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪೊತಲಕಟ್ಟಿ ಗ್ರಾಮದಲ್ಲಿ ಸಂಭವಿಸಿದೆ.
ಸ್ವಾಮಿ (21) ವರ್ಷದ ಮೃತ ದುರ್ದೈವಿ. ಸ್ವಾಮಿಗೆ ಬೈಕ್ ಎಂದರೆ ತುಂಬಾ ಇಷ್ಟವಂತೆ. ನನಗೂ ಒಂದು ಸ್ವಂತ ಬೈಕ್ ಬೇಕು, ಕೊಡಿಸು ಎಂದು ಅಪ್ಪನ ಬಳಿ ಹಲವು ಬಾರಿ ಕೇಳಿದ್ದನು.
ಆದರೆ, ಸದ್ಯಕ್ಕೆ ಬೇಡ ಮುಂದಕ್ಕೆ ಕೊಡಿಸುತ್ತೇನೆ. ಈಗ ಹಣ ಇಲ್ಲ ಎಂದು ತಂದೆ ಎಷ್ಟೇ ಹೇಳಿದರೂ ಆತ ಮಾತ್ರ ತನ್ನ ಹಠ ಬಿಡಲೇ ಇಲ್ಲ. ಇದೇ ವಿಚಾರಕ್ಕೆ ತಂದೆ-ಮಗನ ನಡುವೆ ಸಣ್ಣ ಜಗಳವೂ ನಡೆದಿದ್ದು, ಬೈಕ್ ಕೊಡಿಸಲಿಲ್ಲ ಎಂದು ಮನನೊಂದ ಮಗ ವಿಷ ಸೇವಿಸಿದ್ದ.
ಕೂಡಲೇ ಕುಟುಂಬಸ್ಥರು ಸೇರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಯುವಕ ಬದುಕುಳಿಯಲಿಲ್ಲ. ಈ ಬಗ್ಗೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق