ಮಂಗಳೂರು: ನಗರ ಹೊರವಲಯದ ಕುಲಶೇಖರ ಸಮೀಪದ ಸಿಲ್ವರ್ ಗೇಟ್ ಬಳಿಯ ನಂದಿನಿ ಹಾಲಿನ ಬೂತ್ ಶುಕ್ರವಾರ ತಡರಾತ್ರಿ ಬೆಂಕಿಗೆ ಆಹುತಿಯಾಗಿದೆ.
ವಿಕಲಚೇತನರಾಗಿರುವ ವಸಂತ ಕುಮಾರ್ ಎಂಬವರಿಗೆ ಸೇರಿದ 'ವಿಜೇತ್ ನಂದಿನಿ ಮಿಲ್ಕ್ ಪಾರ್ಲರ್' ಎಂಬ ಹೆಸರಿನ ಈ ಹಾಲಿನ ಬೂತ್ ಶುಕ್ರವಾರ ರಾತ್ರಿ 9:30ರ ವರೆಗೆ ತೆರೆದಿತ್ತು ಎನ್ನಲಾಗಿದೆ.
ಆದರೆ ತಡರಾತ್ರಿ ಸುಮಾರು 2:25ರ ಬಳಿಕ ಕದ್ರಿ ಅಗ್ನಿಶಾಮಕ ಠಾಣೆಗೆ ಬಂದ ಕರೆಯಂತೆ ಸ್ಥಳಕ್ಕೆ ತೆರಳಿದಾಗ ಹಾಲಿನ ಬೂತ್ ಭಾಗಶಃ ಸುಟ್ಟು ಹೋಗಿತ್ತು.
ಬೂತ್‌ನೊಳಗಿದ್ದ ಸುಮಾರು 500 ಲೀ.ನಷ್ಟು ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳು ಸಹಿತ ಎಲ್ಲಾ ವಸ್ತುಗಳಿಗೆ ಹಾನಿಯಾಗಿದೆ.
ಈ ಅವಘಡ ದಿಂದ 2.50 ಲಕ್ಷ ರೂ.ಗಿಂತಲೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق