ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಂಟ್ವಾಳ: ಎಚ್‌ಪಿಸಿಎಲ್‌ ಪೈಪ್ ಲೈನ್ ಕೊರೆದು ಪೆಟ್ರೋಲ್ ಕಳವು

ಬಂಟ್ವಾಳ: ಎಚ್‌ಪಿಸಿಎಲ್‌ ಪೈಪ್ ಲೈನ್ ಕೊರೆದು ಪೆಟ್ರೋಲ್ ಕಳವು

 



ಮಂಗಳೂರು: ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್ ಲೈನ್ ಕೊರೆದು ಪೆಟ್ರೋಲ್  ಕಳ್ಳತನ ಮಾಡಿರುವ  ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೋರ್ನಾಡು ಅರ್ಬಿ ಬಳಿ ಸಂಭವಿಸಿದೆ. 


ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್ ಪೂರೈಕೆ ಮಾಡುವ ಬೃಹತ್ ಪೈಪ್ ಲೈನ್ ಅನ್ನು ಕೊರೆದು ಕಳ್ಳತನ ಮಾಡಿದ್ದಾರೆ. 


ಐವನ್ ಎಂಬಾತನಿಗೆ ಸೇರಿದ ಖಾಸಗಿ ಜಮೀನಿನ ರಸ್ತೆಯಲ್ಲಿ ಪೈಪ್ ಲೈನ್ ಹಾದು ಹೋಗಿತ್ತು. ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದು ಕಂಪೆನಿಯವರು ಹುಡುಕಾಟ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.


20 ಅಡಿ ಆಳದಲ್ಲಿ ಹಾದು ಹೋಗಿದ್ದ ಪೆಟ್ರೋಲ್ ಪೈಪ್ ಲೈನ್ ಅಗೆದು ಇನ್ನೊಂದು ಪೈಪ್ ಅಳವಡಿಸಿ ಪೆಟ್ರೋಲ್ ಕದ್ದಿದ್ದಾರೆ. 


ಹಾಗೆಯೇ ಅರ್ಧ ಕಿ.ಮೀ ದೂರದಲ್ಲಿ ಗೇಟ್ ವಾಲ್ ಸಿಕ್ಕಿಸಿ ಟ್ಯಾಪ್ ಮೂಲಕ ವಾಹನಕ್ಕೆ ಪೆಟ್ರೋಲ್ ತುಂಬಿಸಿ ಮಾರಾಟ ಮಾಡಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم