ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕುಲಶೇಖರ: ನಂದಿನಿ ಹಾಲಿನ ಬೂತ್ ಗೆ ಮಧ್ಯರಾತ್ರಿ ಆಕಸ್ಮಿಕ ಬೆಂಕಿ

ಕುಲಶೇಖರ: ನಂದಿನಿ ಹಾಲಿನ ಬೂತ್ ಗೆ ಮಧ್ಯರಾತ್ರಿ ಆಕಸ್ಮಿಕ ಬೆಂಕಿ

 


ಮಂಗಳೂರು: ನಗರ ಹೊರವಲಯದ ಕುಲಶೇಖರ ಸಮೀಪದ ಸಿಲ್ವರ್ ಗೇಟ್ ಬಳಿಯ ನಂದಿನಿ ಹಾಲಿನ ಬೂತ್ ಶುಕ್ರವಾರ ತಡರಾತ್ರಿ ಬೆಂಕಿಗೆ ಆಹುತಿಯಾಗಿದೆ.


ವಿಕಲಚೇತನರಾಗಿರುವ ವಸಂತ ಕುಮಾರ್ ಎಂಬವರಿಗೆ ಸೇರಿದ 'ವಿಜೇತ್ ನಂದಿನಿ ಮಿಲ್ಕ್ ಪಾರ್ಲರ್' ಎಂಬ ಹೆಸರಿನ ಈ‌ ಹಾಲಿನ ಬೂತ್ ಶುಕ್ರವಾರ ರಾತ್ರಿ 9:30ರ ವರೆಗೆ ತೆರೆದಿತ್ತು ಎನ್ನಲಾಗಿದೆ. 


ಆದರೆ ತಡರಾತ್ರಿ ಸುಮಾರು 2:25ರ ಬಳಿಕ ಕದ್ರಿ ಅಗ್ನಿಶಾಮಕ ಠಾಣೆಗೆ ಬಂದ ಕರೆಯಂತೆ ಸ್ಥಳಕ್ಕೆ ತೆರಳಿದಾಗ ಹಾಲಿನ ಬೂತ್ ಭಾಗಶಃ ಸುಟ್ಟು ಹೋಗಿತ್ತು.  


ಬೂತ್‌ನೊಳಗಿದ್ದ ಸುಮಾರು 500 ಲೀ.ನಷ್ಟು ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳು ಸಹಿತ ಎಲ್ಲಾ ವಸ್ತುಗಳಿಗೆ ಹಾನಿಯಾಗಿದೆ. 


ಈ ಅವಘಡ ದಿಂದ 2.50 ಲಕ್ಷ ರೂ.ಗಿಂತಲೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post