ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ಳಂಬೆಳಗ್ಗೆ ರಸ್ತೆಯ ಮೇಲೆ ಮೊಸಳೆಯ ನಡಿಗೆ: ಆತಂಕ ಸೃಷ್ಟಿಸಿತು ದಾಂಡೇಲಿ ಪರಿಸರದ ಗ್ರಾಮಸ್ಥರಿಗೆ

ಬೆಳ್ಳಂಬೆಳಗ್ಗೆ ರಸ್ತೆಯ ಮೇಲೆ ಮೊಸಳೆಯ ನಡಿಗೆ: ಆತಂಕ ಸೃಷ್ಟಿಸಿತು ದಾಂಡೇಲಿ ಪರಿಸರದ ಗ್ರಾಮಸ್ಥರಿಗೆ



 ಕಾರವಾರ: ಇಂದು ಬೆಳಗ್ಗೆ ಆಹಾರ ಹುಡುಕುತ್ತ ಕಾಳಿ ನದಿಯಿಂದ ಎದ್ದು ಬಂದ ದೊಡ್ಡ ಗಾತ್ರದ ಮೊಸಳೆಯೊಂದು ರಸ್ತೆಯ ಮೇಲೆ ನಡೆಯುತ್ತ ಬಂದಿದ್ದು, ಜನರಲ್ಲಿ ಅಚ್ಚರಿ ಆತಂಕ ಸೃಷ್ಟಿಸಿತು.


ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೋಗಿಲಬನ ಗ್ರಾಮದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಇದನ್ನು ನೋಡಿದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.


ಆದರೆ ಅಧಿಕಾರಿಗಳು ಬರುವುದರೊಳಗೆ ಮೊಸಳೆಯು ರಸ್ತೆಯುದ್ದಕ್ಕೂ ನಡೆದಾಡಿ, ಬಳಿಕ ಗ್ರಾಮವನ್ನು ದಾಟಿ ಕಾಡಿನ ಹಾದಿ ಹಿಡಿದು ಮರಳಿ ನದಿ ಸೇರಿದೆ. ಆದರೆ, ಯಾರಿಗೂ ಯಾವುದೇ ಸಾಕುಪ್ರಾಣಿಗಳಿಗೂ ತೊಂದರೆ ಮಾಡಲಿಲ್ಲ.


ದಾಂಡೇಲಿ ಪರಿಸರದ ಕಾಳಿ ನದಿಯಲ್ಲಿ ಸಾವಿರಾರು ಮೊಸಳೆಗಳು ವಾಸವಾಗಿವೆ. ಅದರೆ ನದಿಯಿಂದ ಹೊರಬಂದು ಗ್ರಾಮದೊಳಕ್ಕೆ ಮೊಸಳೆಯ ಸವಾರಿ ಬಂದಿದ್ದು ಇದೇ ಮೊದಲು ಎಂದು ಈ ಪರಿಸರದ ನಿವಾಸಿಗಳು ತಿಳಿಸಿದ್ದಾರೆ.


ಈ ಮೊದಲು ನದಿಯ ತೀರಕ್ಕೆ ತೆರಳಿದ ಜನರ ಮೇಲೆ ಮೊಸಳೆ ದಾಳಿ ನಡೆದು ಪ್ರಾಣ ಕಳೆದುಕೊಂಡ ಘಟನೆಗಳೂ ಸಾಕಷ್ಟು ನಡೆದಿವೆ. ದಾಂಡೇಲಿಯ ಕಾಗದ ಕಾರ್ಖಾನೆಯ ಬಳಿ ಹರಿಯುವ ನದಿ ತೀರದಲ್ಲಿ ಅತಿ ಹೆಚ್ಚು ಮೊಸಳೆಗಳು ಇವೆ ಎಂದು ಸ್ಥಳೀಯರು ಹೇಳುತ್ತಾರೆ. ಕಾರ್ಖಾನೆಯ ತ್ಯಾಜ್ಯವೇ ಮೊಸಳೆಗೆ ಆಹಾರವಾಗಿದೆ.


ಆದರೆ ಇತ್ತಿಚೆಗೆ ಲಾಕ್‌ಡೌನ್‌ ಕಾರಣದಿಂದ ಕಾರ್ಖಾನೆಯ ಕೆಲಸ ಕಾರ್ಯ ಸ್ಥಗಿತಗೊಂಡಿದ್ದು, ಜನರ ಓಡಾಟವೂ ವಿರಳವಾಗಿತ್ತು. ಇದರಿಂದಾಗಿ ಮೊಸಳೆಗಳಿಗೆ ಆಹಾರದ ಕೊರತೆಯೂ ಉಂಟಾಗಿತ್ತು ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ.



Key Words: Crocodile, Dandeli, Crocodile walk on road, ಮೊಸಳೆ ಬಂತು ಮೊಸಳೆ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم