ಬೆಂಗಳೂರು: ನವೋದಯ ವಿದ್ಯಾಲಯಗಳಲ್ಲಿ ಖಾಲಿ ಇರುವ ಸ್ನಾತಕೋತ್ತರ ಹಾಗೂ ಸ್ನಾತಕ ಶಿಕ್ಷಕರಾದ ಪಿ.ಜಿ.ಟಿ ಹಾಗೂ ಟಿ.ಜಿ.ಟಿ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹೈದರಾಬಾದ್ ವಲಯದ ವ್ಯಾಪ್ತಿಗೆ ಬರುವ ಆಂಧ್ರ ಪ್ರದೇಶ, ತೆಲಾಂಗಣ, ಕರ್ನಾಟಕ, ಕೇರಳ, ಕೇಂದ್ರಾಡಳಿತ ಪ್ರದೇಶಗಳಾದ ಪುದುಚರಿ, ಲಕ್ಷ್ಯದ್ವೀಪ ಮತ್ತು ಅಂಡಮಾನ್, ನಿಕೋಬಾರ್ ಗಳಲ್ಲಿನ ನವೋದಯ ವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್‍ಲೈನ್ ಮೂಲಕ ( https://navodaya.gov.in/nvs/ro/Hyderabad/en/home/) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಉಡುವಳ್ಳಿ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
إرسال تعليق