ಬಂಟ್ವಾಳ : ಔಷಧಿ ತರಲೆಂದು ಪೇಟೆಗೆ ಬಂದ ವೃದ್ದೆಯೋರ್ವರು ಕಾಣೆಯಾದ ಘಟನೆ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಶಾಂತಿ ಪಲ್ಕೆ ನಿವಾಸಿ ವೆಂಕಮ್ಮ ಮೂಲ್ಯ (65) ವರ್ಷ ಅವರು ಕಾಣೆಯಾದ ವೃದ್ದೆ.
ಅವರು ಜುಲೈ 9 ರಂದು ಬೆಳಿಗ್ಗೆ ಔಷಧಿ ತರಲು ಮೆಲ್ಕಾರ್ ಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ವಾಪಸು ಮನೆಗೆ ಹಿಂತಿರುಗಿ ಬಂದಿಲ್ಲ ಎಂದು ಮನೆಯವರು ದೂರು ನೀಡಿದ್ದಾರೆ.
ಈ ವೃದ್ಧೆ ಬಗ್ಗೆ ಮಾಹಿತಿ ದೊರಕಿದಲ್ಲಿ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸರು ಹೇಳಿದ್ದಾರೆ.
إرسال تعليق