ಉಡುಪಿ; ಜಿಲ್ಲೆಯ ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಪತಿ ರಾಮಕೃಷ್ಣ ಅವರನ್ನು ಬಂಧಿಸಿದ್ದಾರೆ.
ಜುಲೈ 12 ರಂದು ಬ್ರಹ್ಮಾವರ ಸಮೀಪದ ಉಪ್ಪಿಕೋಟೆಯಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ವಿಶಾಲ ಗಾಣಿಗ ಅವರ ಕೊಲೆಯಾಗಿತ್ತು.
ದುಬೈನಲ್ಲಿದ್ದುಕೊಂಡು ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ ರಾಮಕೃಷ್ಣ ಉತ್ತರ ಭಾರತ ಮೂಲದ ಹಂತಕರಿಗೆ ಸುಪಾರಿ ನೀಡಿದ್ದ ಆಘಾತಕಾರಿ ಘಟನೆಯೊಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ರಾಮಕೃಷ್ಣ ಅವರು ಆಕ್ರಮ ಸಂಬಂಧ ಹೊಂದಿದ್ದು, ಈ ವಿಚಾರ ಪತ್ನಿಗೆ ತಿಳಿದಿತ್ತು. ಅಲ್ಲದೇ ಆಸ್ತಿ ವ್ಯವಹಾರ ಹಿನ್ನೆಲೆ ಪತ್ನಿ ಹತ್ಯೆಗೆ ಪತಿ ರಾಮಕೃಷ್ಣ ಸಂಚು ರೂಪಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ, ನಿನ್ನೆ ರಾಮಕೃಷ್ಣ ಅವರನ್ನು ಬಂಧಿಸಿದ್ದಾರೆ. ಇದೇ ವೇಳೆ ಸುಪಾರಿ ಹಂತಕರನ್ನು ಬಂಧಿಸಿ, ಇಂದು ಉಡುಪಿಗೆ ಕರೆದುಕೊಂಡು ಬಂದು, ಅಧಿಕೃತವಾಗಿ ಕೊಲೆಯ ಮಾಹಿತಿ ಸಂಗ್ರಹಿಸಲಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق