ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿರಿಯ ಸ್ವಯಂಸೇವಕ ಮನೋಹರ ತುಳಜಾರಾಂ ನಿಧನ

ಹಿರಿಯ ಸ್ವಯಂಸೇವಕ ಮನೋಹರ ತುಳಜಾರಾಂ ನಿಧನ



ಮಂಗಳೂರು: ನಗರದ ಲ್ಯಾಂಡ್‌ಲಿಂಕ್ಸ್ ಬಡಾವಣೆ ನಿವಾಸಿ, ಹಿರಿಯರಾದ ಶ್ರೀ ಮನೋಹರ ತುಳಜಾರಾಂ ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು (ಜು.2) ಸಂಜೆ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.


ಬಾಲ್ಯದಿಂದಲೇ ಸಂಘ ಪರಿವಾರದ ಸಂಘಟನೆಗಳ ನಂಟು ಹೊಂದಿದ್ದ ಅವರು  ನಿವೃತ್ತ  ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿ ಇಟ್ಟಿದ್ದರು. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ, ಗೋವನಿತಾಶ್ರಯ ಟ್ರಸ್ಟ್ ನ ಟ್ರಸ್ಟೀ ಅಗಿ ಅವರು ಅವಿಸ್ಮರಣೀಯ ಸೇವೆ ಸಲ್ಲಿಸಿದ್ದರು.


ಲ್ಯಾಂಡ್‌ಲಿಂಕ್ಸ್ ಬಡಾವಣೆಯ ಯುಗಾದಿ ಸಂಸ್ಕೃತಿಯ ಆರಂಭದಿಂದಲೂ ಅವರು ನೀಡಿದ ಸಹಕಾರ ಮಾರ್ಗದರ್ಶನ ಮರೆಯಲಾಗದ್ದು ಎಂದು ಸಮಿತಿಯ ಅಧ್ಯಕ್ಷರಾಗಿರುವ ನಾರಾಯಣ ಕಂಜರ್ಪಣೆ ಅವರು ಸ್ಮರಿಸಿಕೊಂಡಿದ್ದಾರೆ.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم