ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಅರಿಯಲು ಇದು ಸಕಾಲ: ಡಾ. ಅನಸೂಯಾ ರೈ

ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ಅರಿಯಲು ಇದು ಸಕಾಲ: ಡಾ. ಅನಸೂಯಾ ರೈ

ವಿವಿ ಕಾಲೇಜು: ಡಾ. ಪಂಕಜ್ ಕುಮಾರ್ ರಿಂದ ಐಪಿಆರ್ ಕುರಿತು ವಿಶೇಷ ಉಪನ್ಯಾಸ


ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಐಕ್ಯೂಎಸಿ ಮತ್ತು ಸೂಕ್ಷ್ಮಾಣು ಜೀವಿಶಾಸ್ತ್ರ ವಿಭಾಗಗಳು ಜಂಟಿಯಾಗಿ ‘ಶಿಕ್ಷಣ ಮತ್ತು ಸ್ಟಾರ್ಟ್ಅಪ್‌ಗಳಲ್ಲಿ ಐಪಿಆರ್ ಮತ್ತು ತಂತ್ರಜ್ಞಾನ ವರ್ಗಾವಣೆ’ ಕುರಿತಂತೆ ಇತ್ತೀಚೆಗೆ ವೆಬಿನಾರ್‌ವೊಂದನ್ನು ಆಯೋಜಿಸಿದ್ದವು. 


ಸಂಪನ್ಮೂಲ ವ್ಯಕ್ತಿ, ಮಾನವ ಸಂಪನ್ಮೂಲ ಇಲಾಖೆಯ ಆವಿಷ್ಕಾರ ರಾಯಭಾರಿ ಮತ್ತು ಜೈಪುರದ ಐಐಬಿಎಸ್‌ನ ಐಪಿಆರ್ ಫೆಸಿಲಿಟೇಟರ್ ಡಾ.ಪಂಕಜ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಶಿಕ್ಷಣ ಸಂಸ್ಥೆಗಳನ್ನು ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸುತ್ತಿದೆ. ಶಿಕ್ಷಕರು ತಮ್ಮ ಆವಿಷ್ಕಾರಗಳಿಗಾಗಿ ಪೇಟೆಂಟ್‌ ಪಡೆಯಬಹುದು, ಅಲ್ಲದೆ ವಿದ್ಯಾರ್ಥಿಗಳನ್ನು ಒಳಗೊಂಡ ಸ್ಟಾರ್ಟ್ಅಪ್‌ಗಳೂ ಪೇಟೆಂಟ್‌ ಪಡೆಯಲು ಅರ್ಹ, ಎಂದರು.


“ಪೇಟೆಂಟ್‌ ಪ್ರಕ್ರಿಯೆಗೆ 18 ತಿಂಗಳು ಕಾಯಬೇಕಾಗುತ್ತದೆ. ಮಂಜೂರಾದ ನಂತರ ಅದು 20 ವರ್ಷಗಳ ಕಾಲ ವ್ಯಕ್ತಿಯ ಹೆಸರಿನಲ್ಲೇ ಉಳಿಯುತ್ತದೆ,” ಎಂದರು. 


ಪ್ರಾಂಶುಪಾಲೆ ಡಾ.ಅನಸೂಯಾ ರೈ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಶಿಕ್ಷಕರು ಐಪಿಆರ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಇದು ಸಕಾಲ ಎಂದು ಅಭಿಪ್ರಾಯಪಟ್ಟರು. ಐಕ್ಯೂಎಸಿ ಸಂಯೋಜಕ ಡಾ.ಸುರೇಶ್ ಅತಿಥಿಗಳನ್ನು ಸ್ವಾಗತಿಸಿದರು. ಸೂಕ್ಷ್ಮಾಣು ಜೀವಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಭಾರತಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.


ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದರಾಜು ವಂದನಾರ್ಪಣೆ ಸಲ್ಲಿಸಿದರು. ಸೂಕ್ಷ್ಮಾಣು ಜೀವಿಶಾಸ್ತ್ರ ವಿಭಾಗದ ಸುಮಂಗಲಾ, ಸೇರಿದಂತೆ 60  ಕ್ಕೂ ಹೆಚ್ಚಿನವರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. 


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم