ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹೊರಟ ಯುವಕರಿಗೆ ರಸ್ತೆ ಅಪಘಾತ; ಇಬ್ಬರು ಸಾವು

ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹೊರಟ ಯುವಕರಿಗೆ ರಸ್ತೆ ಅಪಘಾತ; ಇಬ್ಬರು ಸಾವು

 


ತುಮಕೂರು: ಕೋವಿಡ್ ವ್ಯಾಕ್ಸಿನ್​ ಹಾಕಿಸಿಕೊಳ್ಳಲೆಂದು ಕಾರಿನಲ್ಲಿ ಹೊರಟ ಮೂವರು ಯುವಕರು. ಈ‌ ನಡುವೆ ರಸ್ತೆ ಅಪಘಾತ ದಲ್ಲಿ ಇಬ್ಬರು ಮಾರ್ಗಮಧ್ಯೆ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನೆಲಮಂಗಲ ಸಮೀಪದ ಟಿ.ಬೇಗೂರು ಬಳಿ ನಡೆದಿದೆ.


ತುಮಕೂರಿನ‌ ಚಿಕ್ಕಪೇಟೆಯವರಾದ ಉದಯ್ (23) ವರ್ಷ ಮತ್ತು ಪವನ್ (24) ಮೃತಪಟ್ಟವರು. ಮಣಿ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.  


ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬೆಂಗಳೂರಿಗೆ ತೆರಳುವಾಗ ತಾಳೆಕೆರೆ ಬಳಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಉದಯ್​ ಮತ್ತು ಪವನ್​ ಮೃತಪಟ್ಟಿದ್ದಾರೆ.  


ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post