ಆಗ್ರಾ: ಉತ್ತರಪ್ರದೇಶದ ಆಗ್ರಾದ ವಿದ್ಯಾಪುರದಲ್ಲಿ ಶುಕ್ರವಾರ ಎರಡು ಮಕ್ಕಳ ತಾಯಿ ಮೋನಾ ದ್ವಿವೇದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಸಾಯುವ ಮೊದಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಮೂರು ಪುಟಗಳ ಪತ್ರ ಬರೆದಿದ್ದಾರೆ!
ಅದರಲ್ಲಿ, ಈ ದೇಶದ ಮನೆಗಳೊಳಗೆ ಮಹಿಳೆಯರ ಮೇಲಾಗುವ ದೌರ್ಜನ್ಯಗಳನ್ನು ತಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಪತ್ರ ಎಲ್ಲ ಕಡೆ ಓಡಾಡುತ್ತ ಭಾರೀ ಚರ್ಚೆಗೆ ಕಾರಣವಾಗಿದೆ.
ಅವರು ಎದೆಗೆ ಗುಂಡು ಹಾರಿಸಿಕೊಂಡ ಶಬ್ದ ಕೇಳಿದ ತಕ್ಷಣ ಮನೆಯ ಇತರ ಸ್ತ್ರೀಯರು ಕೊಠಡಿಗೆ ಓಡಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಮೋನಾ ಅವರು ತೀರಿಕೊಂಡಿದ್ದಾರೆ.
“ನಾನು ಬಡ ಕುಟುಂಬದಿಂದ ಬಂದವಳು. ಅಮ್ಮ ಬಾಲ್ಯದಲ್ಲೇ ತೀರಿಕೊಂಡಿದ್ದಾರೆ. ಅಪ್ಪ ಕುಡುಕ. ನನ್ನ ಗಂಡನ ಸಹೋದರರಾದ ಪಂಕಜ್, ಅಂಬುಜ್ ನಾನು ಬಡ ಕುಟುಂಬದಿಂದ ಬಂದವಳೆಂದು ಪದೇ ಪದೇ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದರು. ಇವರೆಲ್ಲ ಉತ್ತರ ಪ್ರದೇಶದ ಆಡಳಿತ ಪಕ್ಷಕ್ಕೆ ಸೇರಿದವರು. ಅತ್ತೆ ಮಾವನೂ ನನಗೆ ಚಿತ್ರಹಿಂಸೆ ನೀಡಿದ್ದಾರೆ.
ಎಲ್ಲಿ ಪತಿ ನನ್ನನ್ನು ಮನೆಯಿಂದ ಹೊರದಬ್ಬುತ್ತಾರೋ ಎಂಬ ಹೆದರಿಕೆಯಿಂದ ಅವನ್ನೆಲ್ಲ ಸಹಿಸಿಕೊಂಡಿದ್ದೆ’ ಎಂದು ಮೋನಾ ಪತ್ರದಲ್ಲಿ ಬರೆದುಕೊಂಡಿದ್ದಾರೆ
Post a Comment