ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಟ್ರಾಕ್ಟರ್ ಗೆ ಸಿಲುಕಿ 5 ವರ್ಷದ ಬಾಲಕ ಸಾವು: ಮನನೊಂದ ಚಾಲಕ ಆತ್ಮಹತ್ಯೆಗೆ ಶರಣು

ಟ್ರಾಕ್ಟರ್ ಗೆ ಸಿಲುಕಿ 5 ವರ್ಷದ ಬಾಲಕ ಸಾವು: ಮನನೊಂದ ಚಾಲಕ ಆತ್ಮಹತ್ಯೆಗೆ ಶರಣು

 


ಚಾಮರಾಜನಗರ: ಕ್ರಿಕೆಟ್‌ ಮೈದಾನವನ್ನು ಸಮತಟ್ಟು ಮಾಡಲೆಂದು ತೆರಳಿದ್ದ ಟ್ರ್ಯಾಕ್ಟರ್‌ಗೆ ಸಿಲುಕಿ ಐದು ವರ್ಷದ ಮಗುವೊಂದು ಮೃತಪಟ್ಟಿದ್ದು, ಇದರಿಂದ ಮನನೊಂದ ಟ್ರ್ಯಾಕ್ಟರ್‌ ಚಾಲಕನೂ ಕೂಡ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಗುರುವಾರ ಗುಂಡ್ಲುಪೇಟೆ ತಾಲೂಕಿನ ಸವಕನಹಳ್ಳಿ ಪಾಳ್ಯ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.


ಸವಕನಹಳ್ಳಿ ಪಾಳ್ಯ ಗ್ರಾಮದ ಮುದ್ದ ಹಾಗೂ ನಾಗಮಣಿ ದಂಪತಿಯ ಪುತ್ರ ಹರ್ಷ (5) ಟ್ರ್ಯಾಕ್ಟರ್‌ ಚಕ್ರಕ್ಕೆ ಸಿಲುಕಿ ಮೃತಪಟ್ಟ ಬಾಲಕ.  


ಈ ಘಟನೆಯಿಂದ ಮನನೊಂದ ಟ್ರ್ಯಾಕ್ಟರ್‌ ಚಾಲಕ ಸುನೀಲ್‌ (28) ವರ್ಷ ಆತ್ಮಹತ್ಯೆಗೆ ಶರಣಾದ ಯುವಕ.


ಗ್ರಾಮದ ಹೊರವಲಯದಲ್ಲಿ ಕ್ರಿಕೆಟ್ ಮೈದಾನ ಸಮತಟ್ಟು ಮಾಡಲೆಂದು ಕೆಲವು ಯುವಕರು ಮೂರು ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅವರ ಜೊತೆ ಬಾಲಕ ಹರ್ಷ ಕೂಡ ತೆರಳಿದ್ದಾನೆ.


ಈ ವೇಳೆ ಟ್ರ್ಯಾಕ್ಟರ್‌ವೊಂದರ ಹಿಂಬದಿ ಚಕ್ರಕ್ಕೆ ಸಿಲುಕಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಗುಂಡ್ಲುಪೇಟೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.


ಆದರೆ, ಯುವಕ ಸುನೀಲ್ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್‌ ಚಕ್ರಕ್ಕೆ ಸಿಲುಕಿ ಮಗು ಮೃತಪಟ್ಟಿದೆ. ಇದರಿಂದ ಮನನೊಂದ ಸುನೀಲ್​ ಮೈಸೂರಿಗೆ ತೆರಳಿ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.


ಆತ್ಮಹತ್ಯೆ ಮಾಡಿಕೊಂಡ ಚಾಲಕ ಸುನೀಲ್‌ ಅವರು, ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಪಿಎಚ್‌ಡಿ ಮಾಡುತ್ತಿದ್ದರು ಎನ್ನುವ ಮಾಹಿತಿ ದೊರಕಿದೆ.

(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ







0 تعليقات

إرسال تعليق

Post a Comment (0)

أحدث أقدم