ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಮೂಲಸ್ಥಾನ, ಪವಿತ್ರ ಜಾಂಬ್ರಿ ಗುಹೆಯ ಅನತಿ ದೂರದಲ್ಲಿ, ನಮ್ಮ ಕರ್ನಾಟಕ ರಾಜ್ಯಕ್ಕೆ ಸೇರಿದ ಸ್ಥಳದಲ್ಲಿ, ಕೋಳಿ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದು ಪರಿಸರವನ್ನು ನಾಶ ಮಾಡುತ್ತಿರುವುದು ಇಂದು ನನ್ನ ಗಮನಕ್ಕೆ ಬಂತು. ಇದು ಕ್ಷಮಿಸಲಾಗದ ಅಪರಾಧ.
ಈ ಜಾಗ ಕರ್ನಾಟಕ ರಾಜ್ಯಕ್ಕೆ ಸೇರಿದ ಬಂಟಾಜೆ ರಕ್ಷಿತಾರಣ್ಯದ ಪ್ರದೇಶವಾಗಿರುತ್ತದೆ. ಜಾಂಬ್ರಿ ಗುಹೆಯ ಪರಿಸರ ಕುಡುಕರ ಅಡ್ಡೆಯಾಗಿದೆ. ಅಲ್ಲದೆ ಎಲ್ಲೆಂದರಲ್ಲಿ ಮದ್ಯಪಾನ ಮಾಡಿದ ಬಾಟಲಿಗಳು ಪ್ಲಾಸ್ಟಿಕ್ ತ್ಯಾಜ್ಯಗಳು ರಾರಾಜಿಸುತ್ತಿವೆ.
ಆದುದರಿಂದ ನಮ್ಮ ಹೆಮ್ಮೆಯ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಕೂಡಲೇ ಇತ್ತ ಗಮನಹರಿಸಿ ಸಂಬಂಧಪಟ್ಟವರನ್ನು ಕಾನೂನಾತ್ಮಕವಾಗಿ ಎಚ್ಚರಿಸಿ, ಸೂಕ್ತ ಕ್ರಮವನ್ನು ಕೈಗೊಂಡು ಪರಿಸರವನ್ನು ರಕ್ಷಿಸಬೇಕಾಗಿ ಈ ಮೂಲಕ ಕಳಕಳಿಯಿಂದ ವಿನಂತಿಸುತ್ತೇನೆ.
- ಗಿಳಿಯಾಲು ಮಹಾಬಲೇಶ್ವರ ಭಟ್ (ತಾತ, ಗಿಳಿಯಾಲು)
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment