ದಾವಣಗೆರೆ: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಶನಿವಾರ ರಾತ್ರಿ ಸುರಿದ ಭಾರೀ ಮಳೆಯಿಂದ ದಾವಣಗೆರೆ ಸಮೀಪದ ಮಾಗಾನಹಳ್ಳಿ ಬಳಿಯ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ದಾವಣಗೆರೆ- ಹರಪನಹಳ್ಳಿ ಪ್ರಮುಖ ಸಂಪರ್ಕ ಸೇತುವೆ ಇದಾಗಿದ್ದು, ಹೀಗೆಯೇ ಮಳೆ ಮುಂದುವರಿದರೆ ಈ ಭಾಗದ ಸಂಪರ್ಕ ಸ್ಥಗಿತವಾಗುವ ಭೀತಿ ಎದುರಾಗಿದೆ.
ಸೇತುವೆಯ ಮೇಲೆ ಮಳೆಯ ನೀರು ಹರಿಯುತ್ತಿದ್ದರೂ ಕೆಲವೊಂದು ವಾಹನ ಸವಾರರು ಸಂಚಾರ ನಡೆಸುತ್ತಿದ್ದಾರೆ. ಕೆಲವು ಯುವಕರು ಸೇತುವೆ ದಾಟಿಕೊಂಡು ಹೋಗುವ ಪ್ರಯತ್ನ ಕೂಡ ಮಾಡುತ್ತಿದ್ದಾರೆ.
إرسال تعليق