ಸುರತ್ಕಲ್‌ನಲ್ಲಿ ಪೋಟೋಗ್ರಾಫರ್ಸ್, ಸವಿತ ಸಮಾಜ, ಬ್ಯೂಟಿ ಪಾರ್ಲರ್ ಸೇವಾ ನಿರತರಿಗೆ ಲಸಿಕೆ ಅಭಿಯಾನಕ್ಕೆ ಶಾಸಕರಿಂದ ಚಾಲನೆ
ಸುರತ್ಕಲ್: ನಿರಂತರವಾಗಿ ಜನರ ಸಂಪರ್ಕಕ್ಕೆ ಬರುವವರಿಗೆ ಆಧ್ಯತೆಯ ಮೇರೆಗೆ ಲಸಿಕೆ ನೀಡುವುದು ಅಗತ್ಯ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು. ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಪೋಟೋಗ್ರಾಫರ್ಸ್, ಸವಿತ ಸಮಾಜ, ಬ್ಯೂಟಿ ಪಾರ್ಲರ್ ಸೇವಾ ನಿರತರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಅನ್‌ಲಾಕ್ ಆದ ಸಂದರ್ಭ ಸಮಾಜದ ಪ್ರಮುಖ ಭಾಗವಾಗಿ ಸವಿತಾ ಸಮಾಜ, ಬ್ಯೂಟಿ ಪಾರ್ಲರ್, ಫೋಟೋಗ್ರಾಫರ್‌ಗಳು ಹೆಚ್ಚಿನ ರೀತಿಯಲ್ಲಿ ಜನರ ಹತ್ತಿರದ ಒಡನಾಟ ಹೊಂದಿರಬೇಕಾಗುತ್ತದೆ. ಹೀಗಾಗಿ ಇವರಿಗೆ ಲಸಿಕೆಯನ್ನು ನೀಡುವ ಕುರಿತು ಆರೋಗ್ಯ ಇಲಾಖೆಗೆ ಸೂಚಿಸಿದ ಮೇರೆಗೆ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಲಾಗುತ್ತಿದೆ ಎಂದರು.
ವಿವಿಧೆಡೆ ಕ್ಯಾಂಪ್‌ಗಳಲ್ಲಿ ಪ್ರಥಮ ಲಸಿಕೆ ಪಡೆದ ಬಳಿಕ ದ್ವಿತೀಯ ಡೋಸ್ ಪಡೆಯುವವರು ಆಗಮಿಸಿದ್ದಾರೆ. 18 ವರ್ಷ ಮೇಲ್ಪಟ್ಟ ಯುವ ಸಮಾಜಕ್ಕೂ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ.ಗೊಂದಲಕ್ಕೆ ಎಡೆ ಆಗದಂತೆ ಎರಡನೇ ಡೋಸ್ ಪಡೆಯಲು ಬಾಕಿ ಇರುವವರಿಗೆ ವಾರ್ಡ್ ಮಟ್ಟದಲ್ಲಿ ಕ್ಯಾಂಪ್ ಮಾಡಿದಲ್ಲಿ ಅನುಕೂಲವಾಗುವುದರಿಂದ ಈ ಬಗ್ಗೆ ಸೂಚನೆ ನೀಡಲಾಗುವುದು ಎಂದರು.
ಮನಪಾ ಸದಸ್ಯರಾದ ವರುಣ್ ಚೌಟ, ಸರಿತ ಶಶಿಧರ್, ಲಕ್ಷಿ ಶೇಖರ್ ದೇವಾಡಿಗ, ಬಿಜೆಪಿ ಮುಖಂಡರಾದ ರಾಜೇಶ್ ಮುಕ್ಕ, ವಿಠಲ ಸಾಲ್ಯಾನ್, ಭರತ್ ರಾಜ್ ಕೃಷ್ಣಾಪುರ,ಪೃಥ್ವಿರಾಜ್ ಶೆಟ್ಟಿ ಕಡಂಬೋಡಿ, ಆನಂದ ಭಂಡಾರಿ, ಸುಲತ, ಫೋಟೋಗ್ರಾಫರ್ಸ್ ಎಸೋಸಿಯೇಷನ್ ಅಧ್ಯಕ್ಷ ಜಯಕರ್, ಅಶೋಕ್, ಬಿಜೆಪಿ ಉತ್ತರ ಮಂಡಲದ ಪದಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು,ಸಿಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment