ಸುಳ್ಯ: ತಾಲೂಕಿನ ಎಡಮಂಗಲ ಗ್ರಾಮದ ಡೆಕ್ಕಲ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾrರಾಟ ಮಾಡಲಾಗುತ್ತಿದ್ದು,ಇಲ್ಲಿಗೆ ಪೊಲೀಸರು, ಅಬಕಾರಿ ಇಲಾಖಾಧಿಕಾರಿಗಳು ದಾಳಿ ನಡೆಸಿದರೂ ಆರೋಪಿ ಪುನಃ ಅದೇ ಚಾಳಿ ಮುಂದುವರೆಸಿದ್ದಾನೆ ಎಂಬುದಾಗಿ ಕರ್ನಾಟಕ ರಾಜ್ಯ ದಲಿತ ಸಮಿತಿಯ ಸಂಚಾಲಕ ಮತ್ತು ಎಡಮಂಗಲ ಗ್ರಾಮದ ಮಾಜಿ ನ್ಯಾಯ ಸಮಿತಿ ಅಧ್ಯಕ್ಷ ಕಮಲಾಕ್ಷ ಅವರು ಆರೋಪಿಸಿದ್ದಾರೆ.
ಕಡಬದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ತಾಲೂಕಿನ ಎಡಮಂಗಲ ಗ್ರಾಮದ ಡೆಕ್ಕಲ ಎಂಬಲ್ಲಿ ರಂಜಿತ್ ಎಂಬ ವ್ಯಕ್ತಿಯೋರ್ವನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು,ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ಈಗಾಗಲೇ ಪೊಲೀಸರು, ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಾದರೂ ಯಾವುದೇ ಭಯವಿಲ್ಲದೇ ಈತ ಅದೇ ಚಾಳಿ ಮುಂದುವರೆಸಿದ್ದಾನೆ ಎನ್ನಲಾಗಿದೆ.
ಮನೆಯ ಸಮೀಪದ ಗೊಬ್ಬರ ಗುಂಡಿಯಲ್ಲಿ ಹಾಗೂ ಕೆರೆಯೊಂದರಲ್ಲಿ ಈತ ಮದ್ಯ ಸಂಗ್ರಹ ಮಾಡಿದ್ದು,ನಿರಂತರವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ, ಇದರಿಂದಾಗಿ ಈ ಪ್ರದೇಶದ ಹಲವರು ರೋಗಿಗಳಾಗಿದ್ದಾರೆ ಮತ್ತು ಮೂವರು ಈ ಮದ್ಯ ಸೇವಿಸುವ ಮೂಲಕ ಈ ಹಿಂದೆ ಮೃತಪಟ್ಟ ಬಗ್ಗೆ ಸಂಶಯವೂ ಇದೆ ಎಂದು ಅವರು ಆರೋಪಿಸಿದ್ದಾರೆ.
ಪೊಲೀಸರು ಕೂಡಲೇ ಈತನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು,ಇಲ್ಲವಾದರೆ ಎರಡು ದಿನಗಳಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment