ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಲ್ಲಾಪುರ ಕಾಣೆಯಾಗಿದ್ದ ಆರು ಯುವಕರು ಕಾಡಿನಲ್ಲಿ ಪತ್ತೆ

ಯಲ್ಲಾಪುರ ಕಾಣೆಯಾಗಿದ್ದ ಆರು ಯುವಕರು ಕಾಡಿನಲ್ಲಿ ಪತ್ತೆ

 


ಹುಬ್ಬಳ್ಳಿ : ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಶಿರ್ಲೇ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಯುವಕರು ಗುರುವಾರ ಕಾಣೆಯಾಗಿದ್ದು, ಇಲ್ಲಿನ ನವನಗರದ ಆರು ಯುವಕರು ಶುಕ್ರವಾರ ಪತ್ತೆಯಾಗಿದ್ದಾರೆ.


ನವವನಗರದ ಆಸೀಫ್ ಮಕಬುಲ್ ಸಾಬ್, ಅಹ್ಮದ್ ಸೈಯದ್ ಶೇಖ್, ಅಬತಾಬ್ ಸದ್ದಾಂ, ಮಾಬುಸಾಬ್ ಶಿರಹಟ್ಟಿ, ಶಾನು ಬಿಜಾಪುರ, ಇಮ್ತಿಯಾಜ್ ಮಿಲ್ಲಾನವರ ಫಾಲ್ಸ್ ವೀಕ್ಷಣೆಗೆ ತೆರಳಿ ಕಾಣೆಯಾಗಿದ್ದರು.


ಸ್ಥಳದಲ್ಲಿದ್ದ ವಾಹನ ಗಮನಿಸಿದಾಗ ಸ್ಥಳಿಯರು ಕಾಣೆಯಾದವರು ಹುಬ್ಬಳ್ಳಿಯವರೆಂದು ಭಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.


ಹುಡುಕಾಟ ನಡೆಸಿದಾಗ ಯುವಕರು ಅರಣ್ಯದಲ್ಲಿ ಇರುವುದು ಪತ್ತೆಯಾಗಿದ್ದು ಈ ಮೂಲಕ ಪ್ರಕರಣ ಕೊನೆಗೊಂಡಿದೆ.


ಇಲ್ಲಿನ ನವನಗರದಿಂದ ಪ್ರವಾಸ ಸ್ಥಳ ನೋಡಲು ಬಂದಿದ್ದ ಆರು ಯುವಕರು ಗುರುವಾರದಿಂದ ನಾಪತ್ತೆಯಾಗಿದ್ದು, ಶುಕ್ರವಾರ ಪತ್ತೆಯಾಗಿದ್ದಾರೆ.


ಯಲ್ಲಾಪುರ ತಾಲೂಕಿನಲ್ಲಿ ಬರುವ ಶಿರ್ಲೇ ಫಾಲ್ಸ್ ನೋಡಲು ಬಂದು ಅಲ್ಲಿಂದ ಕಣ್ಮರೆಯಾಗಿದ್ದರು. ಅಲ್ಲಿ ನಿಂತಿರುವ ವಾಹನಗಳನ್ನು ನೋಡಿ ಹುಬ್ಬಳ್ಳಿಯವರು ಎಂದು ಗುರುತಿಸಲಾಗಿತ್ತು. ಆದರೆ ಅವರುಗಳ ಮಾಹಿತಿ ಲಭ್ಯವಾಗಿರಲಿಲ್ಲ.‌


ಶುಕ್ರವಾರ ಯುವಕರು ಅರಣ್ಯದಲ್ಲಿ ಪತ್ತೆಯಾಗಿದ್ದು, ನವನಗರದ ಆಸೀಫ ಮಕಬುಲಸಾಬ ಡಾಲಾಯಿತ್, ಅಹ್ಮದ ಸೈಯ್ಯದ ಶೇಖ, ಅಬತಾಬ್ ಸದ್ದಾಂ ಶಿರಹಟ್ಟಿ, ಮಾಬುಸಾಬ ಮಕಬುಲಸಾಬ ಶಿರಹಟ್ಟಿ, ಶಾನು ಬಿಜಾಪುರಿ ಹಾಗೂ ಇಮ್ತಿಯಾಜ್ ನೀರಸಾಬ ಮುಲ್ಲಾನವರ ಎಂದು ಗುರುತಿಸಲಾಗಿದೆ.


0 تعليقات

إرسال تعليق

Post a Comment (0)

أحدث أقدم