ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರದಲ್ಲಿ ಸಚಿವರಾಗುತ್ತಿರುವುದು ಉಡುಪಿ ಬಿಜೆಪಿಗೆ ಸಂಭ್ರಮ ತಂದಿದೆ.
ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಮಂತ್ರಿಯಾಗುತ್ತಿರುವುದಕ್ಕೆ ಉಡುಪಿ ಪೆರಂಪಳ್ಳಿ ಬಿಜೆಪಿ ಕಾರ್ಯಕರ್ತರು ಅತೀವ ಸಂಭ್ರಮದಲ್ಲಿದ್ದಾರೆ.
ಶೋಭಾರಿಗೆ ಮಂತ್ರಿಪದವಿ ಕರುಣಿಸಿ ಸಾನ್ನಿಧ್ಯದ ಕೀರ್ತಿ ಉಳಿಸಿಕೊಂಡರೇ ಪೆರಂಪಳ್ಳಿ ಮಹಾಲಿಂಗೇಶ್ವರ ಮಹಾಗಣಪತಿ ದೇವರು ..?!
2019 ರ ಲಕ್ಷ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಪೆರಂಪಳ್ಳಿ ಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ನಡೆಯುತ್ತಿತ್ತು . ಅದೇ ಸಂದರ್ಭದಲ್ಲಿ ಶ್ರೀದೇವಳಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಆಗಮಿಸಿದ್ದರು. ಆಗ ಈ ಬಾರಿ ಶೋಭಾ ಗೆದ್ದರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿಯ ದಯೆಯಿಂದ ನಿಶ್ಚಯವಾಗಿಯೂ ಕೇಂದ್ರದಲ್ಲಿ ಮಂತ್ರಿಯಾಗ್ತಾರೆ. ಆ ಕೀರ್ತಿಯನ್ನು ಶ್ರೀ ಸ್ವಾಮಿಯು ಉಳಿಸಿಕೊಳ್ಳುವಂತೆ ಪ್ರಾರ್ಥನೆ ಸಲ್ಲಿಸಲಾಗಿತ್ತು . ಹಾಗೆ ಮಂತ್ರಿಯಾದರೆ ಉಡುಪಿ ಭೇಟಿಗೆ ಬಂದಾಗ ಮತ್ತೆ ಶ್ರೀ ದೇವಳಕ್ಕೆ ಬಂದು ದೇವರ ದರ್ಶನ ಪಡೆಯುವಂತೆ ಅರ್ಚಕರು ತಂತ್ರಿಗಳು ಭಕ್ತರು ಶೋಭಾರಲ್ಲಿ ತಿಳಿಸಿದ್ದರು.
ಈಗ ಎಲ್ಲ ಅಂದುಕೊಂಡಂತೆ ಆಗಿದೆ. ಶ್ರೀ ಕ್ಷೇತ್ರದ ಆರಾಧ್ಯ ದೇವರಾದ ಮಹಾಲಿಂಗೇಶ್ವರ ಮಹಾಗಣಪತಿ ದೇವರು ಶೋಭಾ ತಮ್ಮ ಸಾನ್ನಿಧ್ಯದ ಕೀರ್ತಿ ಉಳಿಸಿಕೊಂಡಿದ್ದಾರೆ. ಶೋಭಾ ಮಂತ್ರಿಯಾಗ್ತಾ ಇದ್ದಾರೆ ಎನ್ನುವ ಸಂಭ್ರಮದಲ್ಲಿ ಗ್ರಾಮದ ಬಿಜೆಪಿ ಕಾರ್ಯಕರ್ತರಿದ್ದಾರೆ.
ಇನ್ನು ಮಂತ್ರಿಯಾಗಿ ಉಡುಪಿಗೆ ಆಗಮಿಸುವ ಶೋಭಾ ಕ್ಷೇತ್ರಕ್ಕೆ ಭೇಟಿ ನೀಡಿ ಮತ್ತೆ ದೇವರ ದರ್ಶನ ಪಡೆದೇ ಪಡೀತಾರೆ ಅನ್ನೋ ಪೂರ್ಣ ವಿಶ್ವಾಸ ಗ್ರಾಮದ ಬಿಜೆಪಿ ಅಭಿಮಾನಿಗಳು ಮತ್ತು ಕಾರ್ಯಕರ್ತರದ್ದು.
-ಜಿ ವಾಸುದೇವ ಭಟ್ ಪೆರಂಪಳ್ಳಿ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment