ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಳ್ತಂಗಡಿ: ದೇರಾಜೆ ಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ಸಾನ್ನಿಧ್ಯದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ದೇರಾಜೆ ಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ಸಾನ್ನಿಧ್ಯದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ


ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದ ದೇರಾಜೆ ಬೆಟ್ಟದಲ್ಲಿ ಶ್ರೀ ದೈವ ಕೊಡಮಣಿತ್ತಾಯ ಸಾನಿಧ್ಯದ ಜೀರ್ಣೋದ್ಧಾರದ ನಿಮಿತ್ತ ಇಂದು ಶಿಲಾನ್ಯಾಸ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.


ಈ ಕ್ಷೇತ್ರಕ್ಕೆ ಸುಮಾರು 250 ವರ್ಷಗಳ ಇತಿಹಾಸವಿದೆ ಹಾಗೂ ಸುಮಾರು ನಲವತ್ತು ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ನೇಮೋತ್ಸವವು ನಡೆದಿದ್ದು, ನಂತರ ಕ್ಷೇತ್ರವು ಶಿಥಿಲಾವಸ್ಥೆಗೆ ತಲುಪಿತ್ತು. ಮರೋಡಿ ಗ್ರಾಮದ ಪೊಸರಡ್ಕ ಶ್ರೀ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಜಿರ್ಣೋದ್ಧಾರದ ನಿಮಿತ್ತ ನಡೆದ ಪ್ರಶ್ನಾ ಚಿಂತನೆಯಲ್ಲಿ ಈ ಸಾನಿಧ್ಯವು ಕಂಡು ಬಂದಿದ್ದು, ಇದರ ಜೀರ್ಣೋದ್ಧಾರದ ಬಳಿಕ ಪೊಸರಡ್ಕ ಗರಡಿಯ ಜೀರ್ಣೋದ್ಧಾರವನ್ನು ನಡೆಸಬೇಕಾಗಿ ತಿಳಿದು ಬಂದಿತ್ತು.


ಶ್ರೀ ಕೊಡಮಣಿತ್ತಾಯ ದೈವದ ಪ್ರಮುಖ ಆರಾಧನಾ ಕೇಂದ್ರಗಳಲ್ಲಿ ದೇರಾಜೆ ಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರವು ಪ್ರಮುಖ ಸ್ಥಾನದಲ್ಲಿದೆ. ಹೆಸರಿಗೆ ತಕ್ಕ ಹಾಗೆ ಸುತ್ತಮುತ್ತ ಅವರ್ಣನೀಯ ಪ್ರಾಕೃತಿಕ ಸೌಂದರ್ಯದ ಮಡಿಲಲ್ಲಿ ಈ ಸಾನಿಧ್ಯವಿದೆ. ಇದರ ಜೀರ್ಣೋದ್ಧಾರದ ಸಲುವಾಗಿ ಇಂದು ಶಿಲಾನ್ಯಾಸ ಕಾರ್ಯಕ್ರಮವನ್ನು ಊರಿನ ಗುರಿಕಾರರು ಹಾಗೂ ಗ್ರಾಮಸ್ಥರ ಕೂಡುವಿಕೆಯಲ್ಲಿ ಶ್ರೀ ಅನಂತ ಅಸ್ರಣ್ಣ ಕೇಳ ಬೊಟ್ಟ ಇವರ  ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.


ಈ ಸಂದರ್ಭ ಕ್ಷೇತ್ರದ ಜೀರ್ಣೊದ್ಧಾರದ ಮುಖ್ಯಸ್ಥರಾದ ಹೇಮರಾಜ್ ಬೆಳ್ಳಿಬೀಡು ಅವರು ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯ ಸಲುವಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಿದ್ದು ಗ್ರಾಮಸ್ಥರ ಪರವಾಗಿ ಶಾಸಕರಿಗೆ ತುಂಬು ಹೃದಯದ ಧನ್ಯವಾದ ಸಮರ್ಪಿಸುವುದಾಗಿ ಹೇಳಿದರು.


ಈ ಸಂದರ್ಭ ಗುರಿಕಾರರಾದ ಹೇಮರಾಜ್ ಬೆಳ್ಳಿಬೀಡು, ರಾಜೇಂದ್ರ ಬಳ್ಳಾಲ್ ಮಿತ್ತಬೀಡು, ಜೀನೇಂದ್ರ ಜೈನ್ ಆರಂಬೊಟ್ಟು, ಜಯವರ್ಮ ಬುಣ್ಣು ಕುಕ್ಯಾರೊಟ್ಟು, ಸುದರ್ಶನ್ ಜೈನ್ ಪಾಂಡಿಬೆಟ್ಟು, ಉದಯ ನಾಪ, ಸೇಸಪ್ಪ ಪೂಜಾರಿ ಉಚ್ಚೂರು, ನಳಿನಿ ಪಿ.ಕೆ ಮತ್ತೊಟ್ಟು, ರಮೇಶ್ ಬಲಾಂತ್ಯರೊಟ್ಟು ಹಾಗೂ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪದ್ಮಶ್ರೀ ಜೈನ್, ಪಂಚಾಯತ್ ಸದಸ್ಯರಾದ ಆಶೋಕ್ ಕೋಟ್ಯಾನ್, ರತ್ನಾಕರ್ ಬುಣ್ಣನ್, ಪತ್ರಕರ್ತರಾದ ಪ್ರದೀಶ್ ಹಾರೊದ್ದು ಹಾಗೂ ಊರ ಪರವೂರ ಗ್ರಾಮಸ್ಥರು ಭಾಗಿಯಾದರು.


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post