ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಿಜೈ: ರೂಟ್ಸ್ ದಂತ ಚಿಕಿತ್ಸಾಲಯ ಉದ್ಘಾಟನೆ

ಬಿಜೈ: ರೂಟ್ಸ್ ದಂತ ಚಿಕಿತ್ಸಾಲಯ ಉದ್ಘಾಟನೆ


ಮಂಗಳೂರು: ದಂತ ಚಿಕಿತ್ಸೆ ನೀಡುವಾಗ ಮಾನವೀಯ ಕಳಕಳಿಯಿಂದ ಚಿಕಿತ್ಸೆ ನೀಡಿದಲ್ಲಿ ರೋಗಿಗಳ ಹೃದಯ ಗೆಲ್ಲಲು ಸಾಧ್ಯವಿದೆ. ಜನರ ಹಲ್ಲು ನೋವನ್ನು ಶಮನ ಮಾಡಿ ಮುಖದಲ್ಲಿ ಮಂದಹಾಸ ಮೂಡಿಸುವ ಬಹುದೊಡ್ಡ ಜವಾಬ್ದಾರಿ ದಂತ ವೈದ್ಯರ ಮೇಲಿದೆ. ದಂತ ಚಿಕಿತ್ಸೆ ನೀಡುವುದರ ಜೊತೆಗೆ ರೋಗ ತಡೆಗಟ್ಟುವುದನ್ನು ದಂತ ವೈದ್ಯರು ರೋಗಿಗಳಿಗೆ ಮನದಟ್ಟು ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಮತ್ತು ಖ್ಯಾತ ದಂತ ವೈದ್ಯರು ಹಾಗೂ ಬಾಯಿ, ಮುಖ, ದವಡೆ ಶಸ್ತ್ರಚಿಕಿತ್ಸಕ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯ ಪಟ್ಟರು.


ದಿನಾಂಕ 15-07-2021 ರಂದು ನಗರದ ಬಿಜೈ ಸಮೀಪದ ಬಿಜೈ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಡಾ|| ಶರತ್ ಪಾರೆ ಮಾಲಿಕತ್ವದ ರೂಟ್ಸ್ ದಂತ ಚಿಕಿತ್ಸಾಲಯವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಡಾ|| ಚೂಂತಾರು ಮಾತನಾಡಿ ಶುಭ ಹಾರೈಸಿದರು.


ಇನ್ನೋರ್ವ ಮುಖ್ಯ ಅತಿಥಿ ರೆವರೆಂಡ್ ಡಾ|| ಜಾನ್ ಬ್ಯಾಪ್ಟಿಸ್ಟ್ ಸಲ್ದಾನಾ ಅವರು ಮಾತನಾಡಿ, ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ನುರಿತ ದಂತ ವೈದ್ಯರು ಮತ್ತು ಬೇರು ನಾಳ ಚಿಕಿತ್ಸಕರು ಅಗತ್ಯವಿದೆ. ಈ ನಿಟ್ಟಿನಲ್ಲಿ ಡಾ|| ಶರತ್ ಪಾರೆ ಅವರಂತಹ ಕೌಶಲ್ಯಪೂರ್ಣ ವೈದ್ಯರು ಸಮಾಜಕ್ಕೆ ಅತ್ಯಮೂಲ್ಯ ಆಸ್ತಿ ಎಂದು ನುಡಿದರು.


ಮಂಗಳೂರು ನಗರದ ಜನರು ಅವರ ಸೇವೆಯನ್ನು ಬಳಸಿಕೊಂಡು, ನೋವು ಶಮನ ಮಾಡಿಕೊಂಡು, ನಗುತ್ತಾ ಬಾಳಲಿ ಎಂದು ಆಶಿಸಿದರು ಮತ್ತು ಡಾ|| ಶರತ್ ಪಾರೆ ಅವರಿಗೆ ಶುಭ ಹಾರೈಸಿದರು. ಶರತ್ ಪಾರೆ ಅವರ ಹೆತ್ತವರಾದ ಡಾ|| ಜಯಪ್ರಸಾದ್ ಪಾರೆ ಮತ್ತು ಶ್ರೀಮತಿ ಸುಧಾ ಪಾರೆ, ರಿಬ್ಬನ್ ಕಟ್ ಮಾಡಿ ದಂತ ಚಿಕಿತ್ಸಾಲಯವನ್ನು ಜನರ ಸೇವೆಗೆ ಅರ್ಪಿಸಿದರು.


ಶ್ರೀಮತಿ ರಕ್ಷಾ ಭಟ್ ಕಾರ್ಯಕ್ರಮ ನಿರ್ವಹಣೆ ಮಾಡಿ ವಂದಿಸಿದರು. ಈ ಸಂದರ್ಭದಲ್ಲಿ ಶ್ರೀ ಜಗದೀಶ್ ಭಟ್ ಬಂಗಾರಡ್ಕ, ನಿವೃತ್ತ ಇಲೆಕ್ಟ್ರಿಕಲ್ ಇಂಜಿನಿಯರ್ VISL ಭದ್ರಾವತಿ, ಶ್ರೀಮತಿ ಸುಮಿತ್ರಾ ಜಗದೀಶ್, ಡಾ|| ನಮಿತಾ, ಸ್ವಾಗತಕಾರಿಣಿ ಭವ್ಯ ಮುಂತಾದವರು ಉಪಸ್ಥಿತರಿದ್ದರು.


0 تعليقات

إرسال تعليق

Post a Comment (0)

أحدث أقدم