ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್‍ಸೈನ್ಸ್ & ಇಂಜಿನಿಯರಿಂಗ್ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ರಾಧಾಕೃಷ್ಣ ಅವರು ‘ಮಿನಿಮೈಸೇಶನ್ ಆಫ್ ಟೈಮ್ ಕಾಂಪ್ಲೆಕ್ಸಿಟಿ ಆ್ಯಂಡ್ ಇನ್ಕ್ರೀಸಿಂಗ್ ದ ರೆಸಿಸ್ಟಿವಿಟಿ ಫಾರ್ ದಿ ಎಟ್ಯಾಕ್ಸ್ ಆಫ್ ಸೈಫರ್ ಸಿಸ್ಟಮ್ಸ್’ ಎಂಬ ವಿಷಯದ ಬಗೆಗೆ ಬರೆದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಇತ್ತೀಚೆಗೆ ಡಾಕ್ಟರೇಟ್ ಪದವಿ ಘೋಷಿಸಿದೆ.
ಇವರು ಮಂಗಳೂರಿನ ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್‍ನ ಸಂಶೋಧನಾ ಕೇಂದ್ರದಲ್ಲಿ ಎಸ್.ಎಂ.ವಿ.ಐ.ಟಿ.ಎಂ, ಬಂಟಕಲ್‍ನ ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್ ಹಾಗೂ ನಿಟ್ಟೆಯ ಎಂ.ಸಿ.ಎ ವಿಭಾಗ ಮುಖ್ಯಸ್ಥ ಡಾ.ಸುರೇಂದ್ರ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪ್ರಬಂಧವನ್ನು ಮಂಡಿಸಿದ್ದರು.
إرسال تعليق