35 ವರ್ಷಗಳ ಕನಸು ನನಸಾಗಿಸಿದ ಶಾಸಕ ಬಿ.ಹರ್ಷವರ್ಧನ್
ನಂಜನಗೂಡು: ತಾಲೂಕಿನ ಹಲವಾರು ಗ್ರಾಮಗಳಿಗೆ ನೀರು ಹರಿಸುವ ನುಗು ಏತ ನೀರಾವರಿ ಯೋಜನೆಯ 35 ವರ್ಷಗಳ ಬಹುದಿನದ ಕನಸನ್ನು ಶಾಸಕ ಬಿ.ಹರ್ಷವರ್ಧನ್ ಅವರು ಈಡೇರಿಸಿದ್ದಾರೆ. ಹಣಕಾಸು ಇಲಾಖೆಯಿಂದ ಯೋಜನೆ ಜಾರಿಗೆ 80 ಕೋಟಿ ಅನುದಾನಕ್ಕೆ ಅನುಮೋದನೆ ದೊರೆತಿದೆ. ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಗೊಂಡ ಬಿ.ಹರ್ಷವರ್ಧನ್ ಅವರಿಗೆ ನುಗು ಏತ ನೀರಾವರಿ ಜಾರಿಗೊಳಿಸಬೇಕೆನ್ನುವುದು ಇಲ್ಲಿನ ಜನರ ಪ್ರಮುಖ ಬೇಡಿಕೆಯಾಗಿತ್ತು. ನುಗು ಜಲಾಶಯ ನೀರಿನ ಮಟ್ಟ ಏರಿಕೆಗಾಗಿ ಕಬಿನಿ ನದಿಯಿಂದ ನುಗು ಏತ ಯೋಜನೆ ಜಾರಿಯಾಗಬೇಕೆಂಬುದು ರೈತರ ಬೇಡಿಕೆಯಾಗಿತ್ತು. ಸರಗೂರು ತಾಲೂಕಿನ ಚಾಮೇಗೌಡನಹುಂಡಿ ಬಳಿ ಕಬಿನಿ ನದಿಯಿಂದ ಪಂಪ್ ಮೂಲಕ ನೀರನ್ನು ಎತ್ತಿ ರೈಸಿಂಗ್ ಮೇನ್ ಮೂಲಕ ನುಗು ನದಿಗೆ ಹರಿಸಿ ಅಣೆಕಟ್ಟು ತುಂಬಿಸುವುದೇ ನುಗು ಏತ ಯೋಜನೆ.
Post a Comment