ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲಬೈಲ್ ಇದರ 2021-2022 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಲ. ಮೋಹನ್ ಕೊಪ್ಪಲ ಕದ್ರಿ ಆಯ್ಕೆಯಾಗಿರುತ್ತಾರೆ.
ಕಾರ್ಯದರ್ಶಿಯಾಗಿ ಲ. ವಿನೂತನ್ ಕಲಿವೀರ್, ಕೋಶಾಧಿಕಾರಿಯಾಗಿ ಲ. ಕಿಶೋರ್ ಡಿ ಶೆಟ್ಟಿ ಆಯ್ಕೆಯಾಗಿರುತ್ತಾರೆ. ನಿಕಟಪೂರ್ವ ಅಧ್ಯಕ್ಷರು ಲ. ಗೋಕುಲ್ ಕದ್ರಿ, ಉಪಾಧ್ಯಕ್ಷರಾಗಿ ಲ.ಮೋಹನ್ ಬರ್ಕೆ, ಪದಾಧಿಕಾರಿಗಳಾಗಿ ಲ. ದೇವಾನಂದ್ - ಟೇಮರ್ ಆಗಿ, ಲ.ಪ್ರದೀಪ್ ಆಳ್ವ- ಟೈಲ್ ಟ್ವಿಸ್ಟರ್ ಆಗಿ, ಲ. ಜೀತನ್ ಸಾಲಿಯಾನ್, - ಸದಸ್ಯತ್ವ ಸಮಿತಿ ಅಧ್ಯಕ್ಷರಾಗಿ ಲ.ವೆಂಕಟೇಶ್ ಎಂ - ಸೇವಾಕಾರ್ಯ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.
ಆಡಳಿತ ಸಮಿತಿ ಸದಸ್ಯರಾಗಿ ಲ. ಕೆ.ಜೆ. ದೇವಾಡಿಗ, ಲ. ನವನೀತ ಶೆಟ್ಟಿ, ಲ. ಚಂದ್ರಹಾಸ ಶೆಟ್ಟಿ, ಲ. ದಿನಕರ ಸುವರ್ಣ, ಲ. ಸುಧಾಕರ ಆಳ್ವ, ಲ. ಬಾಲಕೃಷ್ಣ ಕೊಟ್ಟಾರಿ, ಲ. ನವೀನ್ ಸಿ.ಕೆ. ಇವರು ಆಯ್ಕೆಯಾಗಿರುತ್ತಾರೆ.
ಲ. ಗೋಕುಲ್ ಕದ್ರಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರ್ಯದರ್ಶಿ ಲ. ಗೌರವ್ ಕದ್ರಿ 2020-21 ನೇ ಸಾಲಿನ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಕೋಶಾಧಿಕಾರಿ ಲ. ಧನರಾಜ್ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment