ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ವಿಭಾಗವು ಎ.ಐ.ಸಿ.ಟಿ.ಇ ಟ್ರೈನಿಂಗ್ & ಲರ್ನಿಂಗ್ (ಎ.ಟಿ.ಎ.ಎಲ್) ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ‘ಜೆಂಡರ್ ಈಕ್ವಿಟಿ: ಚ್ಯಾಲೆಂಜಸ್ & ಒಪೋರ್ಚುನಿಟೀಸ್ ಫಾರ್ ಉಮೆನ್ ಇನ್ ಡಿಸಿಶನ್ ಮೇಕಿಂಗ್’ ಎಂಬ ವಿಷಯದ ಬಗೆಗೆ ಐದು ದಿನಗಳ ಆನ್ಲೈನ್ ಕಾರ್ಯಾಗಾರವನ್ನು ಜುಲೈ 26 ರಿಂದ 30 ರವರೆಗೆ ನಿಟ್ಟೆ ಕ್ಯಾಂಪಸ್‍ನಲ್ಲಿ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮವನ್ನು ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎನ್ ವಿನಯ ಹೆಗ್ಡೆ ಉದ್ಘಾಟಿಸಲಿರುವರು. ಈ ಐದು ದಿನಗಳ ಅವಧಿಯಲ್ಲಿ ಸುಮಾರು 14 ಅತಿಥಿಗಳಿಂದ ವಿವಿಧ ವಿಷಯಗಳ ಬಗೆಗೆ ದಿಕ್ಸೂಚಿ ಭಾಷಣಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಇಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ.ನಾಗೇಶ್ ಪ್ರಭು ಅವರ ಮಾರ್ಗದರ್ಶನದಲ್ಲಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಅನಿತಾ ಮರೀನಾ ಕೊಲಾಕೊ ಅವರು ಸಂಯೋಜಿಸಲಿರುವರು ಎಂದು ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق