ಶಾಸಕ ಡಾ.ಭರತ್ ಶೆಟ್ಟಿ ವಿಶೇಷ ಮುತುವರ್ಜಿ
ಮಂಗಳೂರು: ನೀರುಮಾರ್ಗ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮನವಿಯನ್ನು ಪರಿಗಣಿಸಿ ನಿರಂತರ ಸಾರ್ವಜನಿಕ ಸಂಪರ್ಕದಲ್ಲಿರುವ ಉದ್ಯೋಗ ಕ್ಷೇತ್ರಗಳ ನಾಗರಿಕರಿಗೆ ವಿಶೇಷ ಆದ್ಯತೆಯ ಮೇರೆಗೆ ಮಂಗಳೂರು ನಗರ ಉತ್ತರ ಶಾಸಕರಾದ ಡಾ. ವೈ. ಭರತ್ ಶೆಟ್ಟಿಯವರ ವಿಶೇಷ ಮುತುವರ್ಜಿಯಲ್ಲಿ ಶನಿವಾರ ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಲಸಿಕಾ ಅಭಿಯಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಾಶಕ್ತಿ ಕೇಂದ್ರದ ಅದ್ಯಕ್ಷರಾದ ಸಚಿನ್ ಹೆಗ್ಡೆ, ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ಕಿಶೋರ್ ಕುಮಾರ್ ಉಗ್ಗಕೋಡಿ, ಮಹಾಶಕ್ತಿ ಕೇಂದ್ರದ ಪ್ರಮುಖರಾದ ಚೇತನ್ ನಟ್ಟಿಲ್, ಉಳಾಯಿಬೆಟ್ಟು ಪಂಚಾಯತ್ ಅಧ್ಯಕ್ಷರಾದ ಹರಿಕೇಶ್ ಶೆಟ್ಟಿ, ಶಕ್ತಿ ಕೇಂದ್ರ ಪ್ರಮುಖ್ ಯಶ್ವಿನ್ ಹಾಗೂ ಯಾದವ ಸಲ್ಯಾನ್, ಪಂಚಾಯತ್ ಸದಸ್ಯರಾದ ಪುಷ್ಪರಾಜ್ ಮಾನೂರು, ಲಕ್ಷೀ ನಾಯಕ್, ಲಕ್ಷಿ, ವಸಂತ್, ಉತ್ತರ ಮಂಡಲ ಹಿಂದುಳಿದ ಮೋರ್ಚಾದ ಕಾರ್ಯದರ್ಶಿ ಕೃಷ್ಣ ಸಾಲ್ಯಾನ್ ಹಾಗೂ ಮಂಡಲ ಯುವ ಮೋರ್ಚಾದ ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ಉಪಸ್ಥಿತಿ ಇದ್ದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق