ಮಂಗಳೂರು: ಬೈಕಂಪಾಡಿಯ ಹೆದ್ದಾರಿ ಬದಿ ಇರುವ ಮೀನುಮಾರುಕಟ್ಟೆ ಜೀರ್ಣಾವಸ್ಥೆಯಲ್ಲಿದ್ದು ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸ್ಥಳೀಯ ಮೀನುಗಾರರು ಮನವಿ ಮಾಡಿದರು.
ಶುಕ್ರವಾರ ಬೈಕಂಪಾಡಿ ಮೀನು ಮಾರುಕಟ್ಟೆ, ತರಕಾರಿ ಮಾರುಕಟ್ಟೆ ವೀಕ್ಷಿಸಿ ಮೀನುಗಾರರ ಅಹವಾಲು ಆಲಿಸಿದರು. ಎಪಿಎಂಸಿ ಜಾಗ ಇದಾಗಿರುವುದರಿಂದ ಪ್ರತ್ಯೇಕ ವ್ಯವಸ್ಥೆ ಇಲ್ಲವೇ ಎಪಿಎಂಸಿ ಯಿಂದಲೇ ಮಾಡಿಕೊಡುವ ಬಗ್ಗೆ ಶಾಸಕರು ಮನವೊಲಿಸಬೇಕಿದೆ. ಈಗಿರುವ ಮಾರುಕಟ್ಟೆ ಜೀರ್ಣಾವಸ್ಥೆಯಲ್ಲಿದ್ದು ಸುಸಜ್ಜಿತ ಕಟ್ಟಡ ಕಟ್ಟಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದು ಪಾಲಿಕೆ ನಾಮನಿರ್ದೇಶಿತ ಸದಸ್ಯ ರಾಜೇಶ್ ಸಾಲ್ಯಾನ್ ಬೈಕಂಪಾಡಿ ಶಾಸಕರಲ್ಲಿ ಮನವಿ ಮಾಡಿದರು.
ಇದಕ್ಕೆ ಶಾಸಕರು ಪ್ರತಿಕ್ರಿಯಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗುವುದು ಎಂದರು. ಮನಪಾ ಸದಸ್ಯೆ ಸುಮಿತ್ರ ಕರಿಯ, ಮೀನುಗಾರಿಕಾ ಪ್ರಕೋಷ್ಟ ದ.ಕ ಜಿಲ್ಲಾ ಸಂಚಾಲಕ ಗಿರೀಶ್ ಚಿತ್ರಾಪುರ, ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ನವೀನ್ ಶ್ರೀಯಾನ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق