ಪುತ್ತೂರು: ರೈಲು ಸಂಚರಿಸುತ್ತಿದ್ದಂತೆಯೇ ದರೆ ಕುಸಿದು ಮಣ್ಣು ಹಳಿ ಮೇಲೆ ಬಿದ್ದ ಘಟನೆಯೊಂದು ಪುತ್ತೂರು-ಕಬಕ-ಸುಬ್ರಹ್ಮಣ್ಯ ರೈಲ್ವೆ ಹಳಿಯ ನಡುವೆ ವೀರಮಂಗಲ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿರುವುದು ಮಾಹಿತಿ ವರದಿಯಾಗಿದೆ.
ಪ್ರಯಾಣಿಕರ ಲೋಕಲ್ ರೈಲು ಈ ಹಳಿಯಲ್ಲಿ ಸಂಚರಿಸುತ್ತಿದ್ದ ವೇಳೆಯಲ್ಲಿ ವೀರಮಂಗಲ ಗಡಿಪಿಲಿ ಎಂಬಲ್ಲಿ ಏಕಾಏಕಿ ಪಕ್ಕದ ದರೆ ಕುಸಿದ ಪರಿಣಾಮ ಇದರಿಂದಾಗಿ ಮಣ್ಣು ರೈಲಿನ ಮುಂಭಾಗಕ್ಕೆ ಬಿದ್ದಿದ್ದು, ರೈಲಿನ ಗಾರ್ಡ್ ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಈ ಕಾರಣ ರೈಲು ಸಂಚಾರ ಸ್ಥಗಿತಗೊಂಡಿದೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಆಗಮಿಸಿದ್ದು, ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق