ಕುಂಬಳೆ: ಕೇರಳದ 2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶವು ಪ್ರಕಟವಾಗಿದ್ದು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇಕಡಾ ನೂರು ಫಲಿತಾಂಶವನ್ನುವಿದ್ಯಾಲಯವು ಈ ವರ್ಷವೂ ದಾಖಲಿಸಿದೆ.
ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ A+ ಶ್ರೇಣಿಯಲ್ಲಿ ತೇರ್ಗಡೆಹೊಂದಿರುತ್ತಾರೆ. ತೇರ್ಗಡೆಯಾದ ಎಲ್ಲಾ ಮಕ್ಕಳನ್ನು ಆಡಳಿತ ಸೇವಾ ಸಮಿತಿ, ಆಡಳಿತಾಧಿಕಾರಿ ಶ್ರೀಯುತ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿ ಹಾಗೂ ಅಧ್ಯಾಪಕ ವೃಂದವರೆಲ್ಲರೂ ಅಭಿನಂದಿಸಿದ್ದಾರೆ.
ವರದಿ: ವಿಜಯಾ ಸುಬ್ರಹ್ಮಣ್ಯ, ಗ್ರಂಥಪಾಲಿಕೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق