ಅಂದು ಅಜ್ಜ ಬಸವಲಿಂಗಪ್ಪ ಮಲಹೊರುವ ಪದ್ಧತಿಗೆ ನಿಷೇಧ ಹೇರಿದ್ದರು |
ಇಂದು ಮೊಮ್ಮಗ ಹರ್ಷವರ್ಧನ್ ಚರಂಡಿ ತ್ಯಾಜ್ಯ ಹೊರಿಸುವುದಕ್ಕೆ ಅಂತ್ಯ
ನಂಜನಗೂಡು: ನಂಜನಗೂಡು ತಾಲ್ಲೂಕಿನ ಕೆ.ಆರ್.ಪುರ ಗ್ರಾಮದಲ್ಲಿರುವ 200ಕ್ಕೂ ಹೆಚ್ಚು ಮನೆಗಳಿಗೆ ಜುಲೈ 26ರ ಮಹತ್ವ ಸ್ಪಷ್ಟವಾಗಿ ಗೊತ್ತಿಲ್ಲದಿರಬಹುದು. ಆದರೆ ಅವರು ತಮ್ಮ ಶಾಸಕ ಬಿ ಹರ್ಷವರ್ಧನ್ ಅವರಿಗೆ ಮಾತ್ರ ಸದಾ ಕೃತಜ್ಞರಾಗಿರುತ್ತಾರೆ.
ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಹೊಸ ವಾಗ್ದಾನ ಮಾಡಿರುವ ನಂಜನಗೂಡು ಶಾಸಕರು, ತಮ್ಮ ಪ್ರತಿದಿನದ ಅಮಾನವೀಯ ಕೆಲಸದಿಂದ ಕೆ.ಆರ್.ಪುರ ಗ್ರಾಮಸ್ಥರನ್ನು ಮುಕ್ತಗೊಳಿಸಿದ್ದಾರೆ.
ನಂಜನಗೂಡು ತಾಲ್ಲೂಕಿನ ಕೆ.ಆರ್.ಪುರದ ಯಶಸ್ಸಿನ ಕಥೆ, ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ ಅಭಿಯಾನದ ದೊಡ್ಡ ಸಾಮಾಜಿಕ ಕ್ರಾಂತಿಗೆ ಸಮಾನವೆನ್ನುವಂತಿದೆ. ಸ್ವಚ್ಚ ಭಾರತ ಅಭಿಯಾನದಿಂದ ಪ್ರೇರಿತರಾದ ಹರ್ಷವರ್ಧನ್, ಶಾಸಕರಾಗಿ ಆಯ್ಕೆಯಾದಾಗಿನಿಂದಲೂ ತಮ್ಮ ಕ್ಷೇತ್ರದಲ್ಲಿ ಚರಂಡಿ ಹೊಲಸನ್ನು ಎತ್ತಿ ಹೊರಹಾಕುವಂತಹ ಕೆಲಸದಿಂದ ಜನರಿಗೆ ಮುಕ್ತಿ ಕೊಡಿಸುವ ಗುರಿಯನ್ನು ಹೊಂದಿದ್ದರು.
ಯೋಜನೆಗೆ ಮತ್ತೊಂದು ಸೂಕ್ಷ್ಮವಾದ ಮತ್ತು ಭಾವನಾತ್ಮಕ ಸಂಬಂಧವಿದೆ. 50 ವರ್ಷಗಳ ಹಿಂದೆ ರೂಪುಗೊಂಡ ಕ್ರಾಂತಿಕಾರಕ ಯೋಜನೆಯ ಮತ್ತೊಂದು ಮಜಲನ್ನು ಜಾರಿಗೊಳಿಸುವಲ್ಲಿ ಈ ವಾರ ಗ್ರಾಮವು ಹರ್ಷವರ್ಧನ ಜೊತೆ ಸೇರುತ್ತಿದೆ.
ರಾತ್ರಿ ಮಣ್ಣನ್ನು (ಮಲಹೊರುವ ಪದ್ಧತಿ) ಒಯ್ಯುವ ಅಭ್ಯಾಸವನ್ನು ನಿಲ್ಲಿಸುವ ಸರ್ಕಾರದ ಆದೇಶವನ್ನು ಕರ್ನಾಟಕದ ಅಂದಿನ ಪೌರಾಡಳಿತ ಸಚಿವರಾಗಿದ್ದ ಬಿ ಬಸವಲಿಂಗಪ್ಪ ಅವರು ಜುಲೈ 26, 1972 ರಂದು ವಿಧಾನಸಭೆಯಲ್ಲಿ ಘೋಷಿಸಿದ್ದರು. ಹರ್ಷವರ್ಧನ್ ಬಸವಲಿಂಗಪ್ಪನವರ ಮೊಮ್ಮಗ. ತಮ್ಮ ಅಜ್ಜನ ಯೋಜನೆ, ಕನಸು, ಗುರಿಯ ಮುಂದಿನ ಭಾಗವಾಗಿ, ಇಂದಿಗೂ ಗ್ರಾಮದಲ್ಲಿ ಮುಂದುವರಿದಿದ್ದ ಚರಂಡಿ ತ್ಯಾಜ್ಯವನ್ನು ನಿತ್ಯ ಸ್ವಚ್ಛಗೊಳಿಸಬೇಕಾಗಿದ್ದ ಸ್ಥಿತಿಯಿಂದ ಗ್ರಾಮಸ್ಥರನ್ನು ಮುಕ್ತಗೊಳಿಸುವ ಕೆಲಸವನ್ನು ಇಂದು ಪೂರೈಸುತ್ತಿದ್ದಾರೆ.
ಖಾಸಗಿ ಜಮೀನಿನಲ್ಲಿ ಚರಂಡಿ ತ್ಯಾಜ್ಯ ಹರಿದುಹೋಗಬೇಕಿತ್ತು. ಆದರೆ ಆ ಜಮೀನಿನ ಮಾಲಿಕರು ತಮ್ಮ ಜಮೀನಿನಲ್ಲಿ ತ್ಯಾಜ್ಯ ಹರಿಯಲು ಅವಕಾಶ ಕೊಡದ್ದರಿಂದ ಗ್ರಾಮಸ್ಥರು ನಿತ್ಯವೂ ತಾವೇ ಬಕೆಟ್ ನಲ್ಲಿ ತ್ಯಾಜ್ಯವನ್ನು ಹೊತ್ತೊಯ್ದು ಹೊರಗೆ ಹಾಕಬೇಕಿತ್ತು. ಇದೀಗ ಹರ್ಷವರ್ಧನ್ ಇದಕ್ಕೆ ಪರಿಹಾರ ಒದಗಿಸಿದ್ದಾರೆ.
ಚರಂಡಿ ಹೊಲಸನ್ನು ಸಾಗಿಸಲು ಹಳ್ಳಿಯಲ್ಲಿ ಒಳಚರಂಡಿ ಮಾರ್ಗಗಳ ಜಾಲವನ್ನು ನಿರ್ಮಿಸುವ ಯೋಜನೆಯನ್ನು ಹರ್ಷವರ್ಧನ್ ಜಾರಿಗೊಳಿಸಿದ್ದಾರೆ. ಆ ಮೂಲಕ ಅಮಾನವೀಯ ಪದ್ಥತಿಯನ್ನು ಅಂತ್ಯಗೊಳಿಸುತ್ತಿದ್ದಾರೆ.
“ಶಾಸಕನಾಗಿ ನನ್ನ ಅತ್ಯಂತ ತೃಪ್ತಿಕರ ಕೆಲಸ ಇದಾಗಿದೆ. ನನ್ನ ಕ್ಷೇತ್ರದಲ್ಲಿ ಇಂತಹ ಅಮಾನವೀಯ ಕೆಲಸಗಳಿವೆ ಎಂದು ತಿಳಿದಾಗ ನಾನು ದಿಗಿಲುಗೊಂಡೆ. ನಾನು ಈ ಸಂಕಷ್ಟವನ್ನು ಕೊನೆಗೊಳಿಸಬೇಕಾಗಿತ್ತು. ಈಗ ಅದನ್ನು ಪೂರೈಸಿದ್ದೇನೆ. ನನಗೀಗ ಆತ್ಮತೃಪ್ತಿ ಉಂಟಾಗಿದೆ. ಜನರ ಮುಖದಲ್ಲಿ ನಗುವನ್ನು ಕಾಣುತ್ತಿದ್ದೇನೆ" ಎಂದರು ಹರ್ಷವರ್ಧನ್.
'75 ವರ್ಷಗಳ ಸ್ವಾತಂತ್ರ್ಯ ಚಳವಳಿಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಾನು ನನ್ನ ರಾಜ್ಯ ಮತ್ತು ದೇಶದಲ್ಲಿ ಈ ರೀತಿಯ ಅಮಾನವೀಯ ಕೆಲಸದಿಂದ ಜನರನ್ನು ಮುಕ್ತಗೊಳಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಲು ಬಯಸುತ್ತೇನೆ" ಎಂದು ಹರ್ಷವರ್ಧನ್ ಹೇಳಿದರು.
ಅಲ್ಲದೆ, ಹ್ಯೂಮನ್ ಡಿಗ್ನಿಟ್ ಫೋರಂ ರಚಿಸುವ ನಿರ್ಧಾರವನ್ನು ಘೋಷಿಸಿದರು. ಜನರು ತಮ್ಮದೇ ಕೈಯಿಂದ ತ್ಯಾಜ್ಯ ಹೊರಹಾಕುವ ಪದ್ಧತಿಯಿಂದ ಮುಕ್ತಗೊಳಿಸಲು ವೇದಿಕೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
ಜುಲೈ 26, 1972ರಂದು ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ಬಸವಲಿಂಗಪ್ಪ ಅವರು “ನಾನು ಕೆಲಸ ಮಾಡದೆ ಯಾವುದಕ್ಕೂ ಕ್ರೆಡಿಟ್ ಪಡೆಯುವ ವ್ಯಕ್ತಿಯಲ್ಲ. ಅಮಾನವೀಯ ದುಷ್ಟ ಸಂಪ್ರದಾಯವನ್ನು ಆದಷ್ಟು ಬೇಗನೆ ರದ್ದುಗೊಳಿಸಬೇಕು ಎಂಬುದು ನನ್ನ ಪ್ರಾಮಾಣಿಕ ಪ್ರಯತ್ನ” ಎಂದಿದ್ದರು.
ಈಗ ಗ್ರಾಮದಲ್ಲಿ ಸುಸಜ್ಜಿತ ಚರಂಡಿ ವ್ಯವಸ್ಥೆ ಕಲ್ಪಿಸುವ ಮೂಲಕ ಗ್ರಾಮದ ಜನರು ನಿಟ್ಟುಸಿರು ಬಿಡುವಂತಾಗಿದೆ. ಗ್ರಾಮದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡಲು ಅತ್ಯಂತ ಮಹತ್ವದ ಹೆಜ್ಜೆ ಇಟ್ಟಂತಾಗಿದೆ.
ಕೆ.ಆರ್.ಪುರ ನಿವಾಸಿ ಮಂಗಲಮ್ಮ ಅವರು, “ನನ್ನ ಗಂಡ ರಾತ್ರಿ ಚರಂಡಿ ನೀರನ್ನು ಒಯ್ಯುವುದಕ್ಕೆ ಮತ್ತು ನನ್ನ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆನ್ನುವುದಕ್ಕೆ ಮತ್ತು ಮನೆಯ ಸುತ್ತಲಿನ ವಾತಾವರಣ ಆರೋಗ್ಯಕರವಲ್ಲದ ಕಾರಣ ಕಾಯಿಲೆಗಳು ಬರುವುದರ ಬಗ್ಗೆ ನಾನು ಇನ್ನು ಮುಂದೆ ಚಿಂತಿಸುವುದಿಲ್ಲ. ಆರೋಗ್ಯ ಮತ್ತು ನೈರ್ಮಲ್ಯವನ್ನು ನೋಡಿಕೊಂಡ ನಮ್ಮ ಶಾಸಕರಿಗೆ ನಾವು ಆಭಾರಿಯಾಗಿದ್ದೇವೆ” ಎನ್ನುತ್ತಾರೆ.
ಶಿವಸ್ವಾಮಿ ನಿತ್ಯ ಚರಂಡಿ ಹೊಲಸನ್ನು ಎತ್ತಿ ಹಾಕುವ ಮೂಲಕ ಅವಮಾನವನ್ನು ಎದುರಿಸುತ್ತಿದ್ದರು. "ಆರೋಗ್ಯಕರವಲ್ಲದ ಅಭ್ಯಾಸದಿಂದಾಗಿ ಯಾವುದಾದರೂ ರೋಗವನ್ನು ಹೊಂದುತ್ತೇನೇನೋ ಎಂದು ಚಿಂತಿಸದೆ ಇಂದು ನಾನು ಶಾಂತವಾಗಿ ಮಲಗುತ್ತೇನೆ" ಎನ್ನುತ್ತಾರೆ ಅವರು.
ಕೆ.ಆರ್.ಪುರದ ನಿವಾಸಿಗಳಲ್ಲಿ ಸಿದ್ದಪ್ಪ ಕೂಡ ಒಬ್ಬರು. “ನಾವು ಮತ್ತೆ ಮನುಷ್ಯರಾಗಿದ್ದೇವೆ. ಬೇರೆ ಹಳ್ಳಿಯ ಜನರು ಇನ್ನು ಮುಂದೆ ನಮ್ಮನ್ನು ಅಪಹಾಸ್ಯ ಮಾಡುವುದಿಲ್ಲ. ಅವರು ನಮ್ಮನ್ನು ಸಾಮಾನ್ಯ ಜನರಂತೆ ನೋಡುತ್ತಾರೆ” ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಈ ವರ್ಷದ ಜನವರಿಯಲ್ಲಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಇತರ ರೀತಿಯ ಅಪಾಯಕಾರಿ ಶುಚಿಗೊಳಿಸುವಿಕೆ ಅಥವಾ ಅಪಾಯಕಾರಿ ಶುಚಿಗೊಳಿಸುವಿಕೆಗಾಗಿ ಹೊಸ ಕಾನೂನನ್ನು ಜಾರಿಗೆ ತರಲು ಮಾನವಚಾಲಿತ ಸ್ಕ್ಯಾವೆಂಜಿಂಗ್‌ನ ವ್ಯಾಖ್ಯಾನವನ್ನು ವಿಸ್ತರಿಸಲು ಶಿಫಾರಸು ಮಾಡಿತ್ತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment